– ಈ ಆನೆ ಮರಿಯನ್ನ ದತ್ತು ಪಡೆದ್ರೆ ನಿಮ್ಮಿಷ್ಟದ ಹೆಸರಿಡೋ ಅವಕಾಶ
ಆನೇಕಲ್: ಸಾಮಾನ್ಯವಾಗಿ ಮನುಷ್ಯರು ಬರ್ತ್‌ಡೇ ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆನೆಯೊಂದು ತನ್ನ ಎರಡನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡಿದೆ.
ಹೌದು, ಬನ್ನೇರುಘಟ್ಟ (Bannerghatt) ಜೈವಿಕ ಉದ್ಯಾನವನದಲ್ಲಿ ಸಫಾರಿಯ ಸೀಗೆಕಟ್ಟೆ ಬಳಿ ಆನೆ ಮರಿಯ ಬರ್ತ್‌ಡೇ ಆಚರಿಸಲಾಗಿದೆ. ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿಕೊಂಡು ರೀಟಾ ಎಂಬ ಆನೆಯ ಗಂಡು ಮರಿಯ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್ ಒಂದು ಹೇಳಿಕೆ, ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಕರಗಿತು ಹೂಡಿಕೆದಾರರ 8 ಲಕ್ಷ ಕೋಟಿ ಸಂಪತ್ತು
ಕಲ್ಲಂಗಡಿ, ಸೇಬು, ದ್ರಾಕ್ಷಿ, ಬಾಳೆಹಣ್ಣು, ಜೋಳ ಸೇರಿದಂತೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನ ನೀಡಿ ಸಿಬ್ಬಂದಿ ಆನೆ ಮರಿಯ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.
ಈವರೆಗೆ ಬನ್ನೇರುಘಟ್ಟ ಝೂ ಮತ್ತು ಸಫಾರಿಯಲ್ಲಿ ಒಟ್ಟು 28 ಆನೆಗಳಿವೆ. ಈ ಪೈಕಿ ರೀಟಾಳ ಮರಿಯನ್ನ ದತ್ತು ಪಡೆದ್ರೆ ಪ್ರಾಣಿಪ್ರಿಯರಿಗೆ ಒಂದು ವಿಶೇಷ ಅವಕಾಶವನ್ನು ಅಲ್ಲಿನ ಆಡಳಿತ ಮಂಡಳಿ ಇದನ್ನೂ ಓದಿ:ನೀಡಿದೆ. ಐದು ವರ್ಷಗಳ ಕಾಲ ದತ್ತು ಪಡೆದ್ರೆ ಮರಿಯಾನೆಗೆ ತಮ್ಮ ಇಷ್ಟದ ಹೆಸರನ್ನ ಇಡಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ – ಭಾಗಮಂಡಲ, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆ
