ಪ್ರಿಟೋರಿಯಾ: ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿಮಾಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ ಏನಿದೆ?: ಸಫಾರಿಗೆ ತೆರಳಿದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ ಮಾಡಿದ್ದು, ಭಯಭೀತರಾದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಸಫಾರಿ ವಾಹನದಿಂದ ಇಳಿದು ಓಡುತ್ತಿರುವ ದೃಶ್ಯವನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೋಡಬಹುದಾಗಿದೆ.
Advertisement
Advertisement
ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಗ್ಲೋವೆಲೆಟ್ ಮತ್ತು ಫಲಬೋರ್ವಾ ಪಟ್ಟಣಗಳ ನಡುವೆ ಇರುವ ವನ್ಯಜೀವಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆನೆಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಬಗ್ಗೆ ತಿಳಿಯಲು ಬಂದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ ನಡೆಸಿದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ
Advertisement
Advertisement
ಪರಿಸರ ತರಬೇತಿ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ಮಾಡಿದೆ. ಈ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಬಳಿ ಇದ್ದ ವಸ್ತುಗಳನ್ನು ಬಿಟ್ಟು ಓಡಿರುವುದು ಸೆರೆಯಾಗಿದೆ. ಸಫಾರಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆನೆಯ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ.