ಹಾಸನ: ಜಿಲ್ಲೆಯಲ್ಲಿ ಆನೆಗಳ (Elephant) ಹಾವಳಿ ಮುಂದುವರಿದಿದ್ದು, ಬೇಲೂರಿನ (Beluru) ಮಲಸಾವರ ಗ್ರಾಮದಲ್ಲಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನು ನಾಶಮಾಡಿವೆ. ಗಜಪಡೆ ಬೆಳೆಗಳ ಮೇಲೆ ದಾಳಿ ಮಾಡುವುದನ್ನು ರೈತರು ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಅರಣ್ಯಾಧಿಕಾರಿಗಳ ಮುಂದಿಟ್ಟು ಅಳಲು ತೋಡಿಕೊಂಡಿದ್ದಾರೆ.
20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಕಾಫಿ, ಮೆಣಸು, ಏಲಕ್ಕಿ, ಅಡಕೆ ಗಿಡಗಳು ಹಾಗೂ ನಾಟಿ ಮಾಡಿದ್ದ ಭತ್ತದ ಗದ್ದೆಯನ್ನು ತುಳಿದು ಸಂಪೂರ್ಣವಾಗಿ ನಾಶ ಮಾಡಿವೆ. ಗ್ರಾಮದ ತೀರ್ಥಕುಮಾರ್, ಕಲ್ಲೇಶ್, ವಿಜಯ್, ಮಲ್ಲೇಶ್ ಹಾಗೂ ಇನ್ನಿತರ ರೈತರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ದೃಶ್ಯವನ್ನು ರೈತರೊಬ್ಬರು ಎತ್ತರದ ಮರದ ಮೇಲೆ ಕುಳಿತು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕರುನಾಡ ಮಂದಿಗೆ ಮತ್ತೊಂದು ಶಾಕ್- ಬೇಳೆ, ತರಕಾರಿ ಬಳಿಕ ಅಕ್ಕಿ ಬೆಲೆಯೂ ದುಬಾರಿ
ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಕಾಡಾನೆಗಳು ಹಿಂಡಿನ ದಾಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಜೀವ ಭಯದಿಂದ ತೋಟ, ಹೊಲ, ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು (Forest Department) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ
Web Stories