Connect with us

Latest

ಆರ್ಮಿ ಕ್ಯಾಂಟೀನ್‍ಗೆ ನುಗ್ಗಿದ ಗಜರಾಜ

Published

on

ಕೋಲ್ಕತಾ: ಆರ್ಮಿ ಕ್ಯಾಂಟೀನಿಗೆ ಆನೆಯೊಂದು ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಅಲಿಪುರ್ದೌರ್ ಜಿಲ್ಲೆಯ ಹಸಿಮರದಲ್ಲಿನ ಆರ್ಮಿ ಕ್ಯಾಂಟೀನಿಗೆ ಆನೆ ನುಗ್ಗಿದ್ದು, ಜನರನ್ನು ಭಯಬೀತರನ್ನಾಗಿ ಮಾಡಿದೆ. ಅದೃಷ್ಟವಶಾತ್ ಆನೆ ನುಗ್ಗಿದ ಸಂದರ್ಭದಲ್ಲಿ ಕ್ಯಾಂಟೀನ್ ಟೇಬಲ್‍ಗಳ ಬಳಿ ಯಾರೂ ಇರಲಿಲ್ಲ. ಖಾಲಿ ಇದ್ದ ಡೈನಿಂಗ್ ಹಾಲ್‍ಗೆ ಆನೆ ನುಗಿದ್ದು, ಅಲ್ಲಿದ್ದ ಟೇಬಲ್ ಹಾಗೂ ಚೇರುಗಳನ್ನು ಕೆಡವಿದೆ.

ಆನೆ ಒಳಗೆ ಧಾವಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಒಳಗೆ ಓಡಿ ಹೋಗಿದ್ದು, ನಂತರ ಆನೆ ಬೆದರಿಸಲು ಕೂಗಾಡಿದ್ದಾರೆ. ಆದರೆ ಗಜರಾಜ ಮಾತ್ರ ಯಾವುದಕ್ಕೂ ಕ್ಯಾರೆ ಎಂದಿಲ್ಲ. ನಂತರ ಒಂದು ರಟ್ಟಿಗೆ ಬೆಂಕಿ ಹಚ್ಚಿಕೊಂಡು ತಂದಿದ್ದಾರೆ, ಆನೆ ಅದಕ್ಕೂ ಹೆದರಿಲ್ಲ.

ಆನೆ ಇನ್ನೂ ಒಳಗೆ ಬರಲು ಯತ್ನಿಸುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಆನೆಯನ್ನು ಓಡಿಸಲು ಉಪಾಯ ಮಾಡಿದ್ದಾರೆ. ಎಷ್ಟೇ ಕೂಗಾಡಿದರು ಆನೆ ಹಿಂದಕ್ಕೆ ಸರಿಯದ್ದನ್ನು ಕಂಡು ಒಂದು ದೊಡ್ಡ ಕಟ್ಟಿಗೆಗೆ ಬೆಂಕಿ ಹಚ್ಚಿ ಅದಕ್ಕೆ ತೋರಿಸಿದ್ದಾರೆ. ನಂತರ ಆನೆ ಹಿಂದೆಕ್ಕೆ ಸರಿದಿದ್ದು, ಹೊರಕ್ಕೆ ಓಡಿ ಹೋಗಿದೆ.

ಅಲ್ಲಿನ ಸಿಬ್ಬಂದಿ ಆನೆಯನ್ನು ಓಡಿಸಲು ಹರಸಾಹಸ ಪಟ್ಟಿದ್ದು, ನಂತರ ಹೇಗೋ ಮಾಡಿ ಹೊರಗೆ ಕಳುಹಿಸಿದ್ದಾರೆ. ಅದೇ ರೀತಿ ಬೆಂಕಿಯ ಕಟ್ಟಿಗೆಯಿಂದ ಆನೆಯನ್ನು ಹಿಂಬಾಲಿಸಿದ್ದು, ಕಸರತ್ತು ಮಾಡಿ ಆನೆಯನ್ನು ಆವರಣದಿಂದ ಓಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಲಪಾಟ ಅರಣ್ಯ ಪ್ರದೇಶದಿಂದ ಹಸಿಮರ ಕೂಗಳತೆ ದೂರದಲ್ಲಿದ್ದು, ಇದೇ ಪ್ರದೇಶದ ಕಾಫೀ ಎಸ್ಟೇಟ್‍ನಲ್ಲಿ ಆರ್ಮಿ ಕ್ಯಾಂಟೀನ್ ಇದೆ. ಅರಣ್ಯ ಪ್ರದೇಶ ಹತ್ತಿರ ಇರುವುದರಿಂದ ಆನೆಗಳು ಜನ ವಸತಿ ಪ್ರದೇಶಗಳಿಗೆ ಆಗಾಗ ಲಗ್ಗೆ ಇಡುತ್ತಿರುತ್ತವೆ. ಹೀಗಾಗಿ ಇಲ್ಲಿಯವರಿಗೆ ಆನೆ ಓಡಿಸುವುದು ಸಹ ರೂಢಿಯಾಗಿದೆ. ಹಸಿಮರದಿಂದ ಭೂತಾನ್ ಕೇವಲ 15 ಕಿ.ಮೀ. ದೂರದಲ್ಲಿದೆ.

Click to comment

Leave a Reply

Your email address will not be published. Required fields are marked *