– ಕರುಳುಕಿತ್ತು ಬರುವಂತಿದೆ ಮರಿಯಾನೆಯ ರೋಧನೆ
ಹಾಸನ: ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆಯನ್ನು 2 ದಿನಗಳ ಹಿಂದೆಯಷ್ಟೇ ರಕ್ಷಣೆ ಮಾಡಲಾಗಿದ್ದು, ಇದೀಗ ಸಾವನ್ನಪ್ಪಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿಯಲ್ಲಿ ಕೆಸರಿನಲ್ಲಿ ಸಿಲುಕಿದ ಪರಿಣಾಮ ಕಾಲು ಮುರಿತಗೊಂಡಿತ್ತು. ಹೀಗಾಗಿ ಆನೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ಸೂಕ್ತ ಚಿಕಿತ್ಸೆ ಸಿಗದೆ ಕಾಡಾನೆ ರಾತ್ರಿ ಕೊನೆಯುಸಿರೆಳೆದಿದೆ.
Advertisement
Advertisement
ನೀರು ಕುಡಿಯಲು ಹೋಗಿ ತಾಯಾನೆಯ ಕಾಲು ಕೆಸರಿನಲ್ಲಿ ಸಿಲುಕಿ ನರಳಾಡುತ್ತಿತ್ತು. ಇತ್ತ ತನ್ನ ತಾಯಿಯ ವೇದನೆ ಕಂಡು ಮರಿಯಾನೆ ಮರುಗುತ್ತಿತ್ತು. ಹೀಗಾಗಿ ತಾಯಿ ರಕ್ಷಣೆಗಾಗಿ ಗೀಳಿಡುತ್ತಿದ್ದ ಮರಿಯಾನೆ ಜೊತೆಗೆ ಆನೆಯನ್ನ ಅರಣ್ಯ ಇಲಾಖೆಯು ಎರಡು ದಿನದ ಹಿಂದೆ ಕಾಡಾನೆಯನ್ನು ರಕ್ಷಿಸಿ ಚಿಕಿತ್ಸೆ ನೀಡಿತ್ತು.
Advertisement
Advertisement
ಆನೆ ರಕ್ಷಣೆ ಬಳಿಕ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವನ್ಯ ಜೀವಿವೈದ್ಯರು ಪರದಾಡಿದ್ದರು. ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲು ಅನುಮತಿ ಸಿಗದಿದ್ದರಿಂದ ಅಗತ್ಯ ಚಿಕಿತ್ಸೆ ದೊರಕದೆ ಆನೆ ಮೃತಪಟ್ಟಿದೆ ಎನ್ನಲಾಗಿದೆ. ಈ ಮೂಲಕ ಸತತ ಆರು ದಿನಗಳ ನರಳಾಟದ ಬಳಿಕ ಮೂಕಪ್ರಾಣಿ ಪ್ರಾಣಬಿಟ್ಟಿದೆ. ಇತ್ತ ಅಮ್ಮನ ಸಾವು ಕಂಡು ಮರಿಯಾನೆಯ ಮೂಕ ರೋಧನೆ ನೋಡಿದ್ರೆ ಎಂತವರ ಮನಸ್ಸು ಕರಗುವಂತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv