– ಆಸ್ಪತ್ರೆಯಿಂದ ಡಿಸ್ಚಾರ್ಜ್, ಮನೆಯಲ್ಲಿ ನಿತೇಶ್ ರೆಸ್ಟ್
– ಬ್ರೇಕ್ ಫೇಲ್ಯೂರ್ ಕಾರಣದ ಬಗ್ಗೆ ಪೊಲೀಸರಿಂದ ತನಿಖೆ
ಬೆಂಗಳೂರು: ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದ್ದ ಅಪಘಾತ ಪ್ರಕರಣದ ಕುರಿತು ಕಾರ್ ಚಾಲಕ ಇದೀಗ ಹೇಳಿಕೆ ನೀಡಿದ್ದಾನೆ. ಸ್ಪೀಡ್ ನಲ್ಲಿದ್ದೆ ಅನ್ನೋದಷ್ಟೇ ಗೊತ್ತು. ರಸ್ತೆ ಬಿಟ್ಟು ಪಕ್ಕಕ್ಕೆ ಯಾಕೆ ಹೋದೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾನೆ.
ಸೆಪ್ಟೆಂಬರ್ 14ರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಲೇ ಬೇ ನಲ್ಲಿ ನಿಂತಿದ್ದ ಯುವಕ ಪ್ರೀತಮ್, ಯುವತಿ ಕೃತಿಕಾ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ವೇಗವಾಗಿ ಬಂದ ಕಾರು ಗುದ್ದಿದ ರಭಸಕ್ಕೆ ಇಬ್ಬರು ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದ್ದರು. ಈ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿತ್ತು. ಈ ಕುರಿತು ಇದೀಗ ಕಾರ್ ಚಾಲಕ ನಿತೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
Advertisement
Advertisement
ಅಲ್ಲಿಗೆ ಬಂದಾಗ ಏನಾಯಿತೋ ಗೊತ್ತಿಲ್ಲ. ಸ್ಪೀಡ್ ನಲ್ಲಿದ್ದೆ ಅನ್ನೋದಷ್ಟೆ ಗೊತ್ತು. ನಂತರದ ಬೆಳವಣಿಗೆಗಳು ಗೊತ್ತಿಲ್ಲ. ರಸ್ತೆ ಬಿಟ್ಟು ಯಾಕೆ ಪಕ್ಕಕ್ಕೆ ಹೋದೆ ಅನ್ನೋದು ಸಹ ನನಗೆ ಅರಿವಿಲ್ಲ ಎಂದು ಹೇಳಿದ್ದಾನೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಮೇಲಿನಿಂದ ಬಿದ್ದು ಟೆಕ್ಕಿ ಯುವಕ, ಯುವತಿ ಸಾವು
Advertisement
ಕ್ರಿಕೆಟ್ ಆಡಿಕೊಂಡು ಮನೆ ಸೇರಲು ನಿತೇಶ್ ಸ್ಪೀಡ್ ಆಗಿ ಕಾರ್ ಓಡಿಸಿದ್ದ. ಡ್ರೈವಿಂಗ್ ವೇಳೆ ಆಯಾಸದಿಂದ ನಿದ್ದೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರ ಪ್ರಾಣ ತೆಗೆದ ನಿತೇಶ್ ಗೆ ಜಾಮೀನು ಸಿಕ್ಕಿದ್ದು, ಕಾಂಪೌಂಡಬಲ್ ಅಫೆನ್ಸ್ ನಡಿ ಆರೋಪಿಗೆ ಜಾಮೀನು ನೀಡಲಾಗಿದ್ದು, ಸ್ಟೇಷನ್ ಬೇಲ್ ಮೇಲೆ ಪೊಲೀಸರು ಬಿಟ್ಟಿದ್ದಾರೆ.
Advertisement
ಆರೋಪಿಯ ಬೆನ್ನು ಹುರಿ ಡ್ಯಾಮೇಜ್ ಆಗಿದೆ, ಹಿಪ್ಸ್ ಇಂಜ್ಯುರಿ ಆಗಿದೆ, ಎದೆ ಹಾಗೂ ಕಾಲುಗಳಿಗೆ ಸಹ ಪೆಟ್ಟು ಬಿದ್ದಿದೆ. ಆರೋಪಿ ಇನ್ನೂ ಮಲಗಿದ್ದ ಜಾಗದಲ್ಲಿಯೇ ಮಲಗಿದ್ದಾನೆ. ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಾಮೀನು ನೀಡಲಾಗಿದೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ಭೀಕರ ಅಪಘಾತ
ಸದ್ಯ ನಿತೇಶ್‍ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆಸ್ಪತ್ರೆಗೆ ಹೋಗಿ ಆರೋಪಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿಯೇ ಅರೆಸ್ಟ್ ಮಾಡಿ, ಬಳಿಕ ಜಾಮೀನು ಪ್ರಕ್ರಿಯೆ ಮುಗಿಸಿದ್ದಾರೆ. ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣನಾಗಿ, ಇದೀಗ ತಾನೂ ಹಾಸಿಗೆ ಹಿಡಿದಿದ್ದಾನೆ.
ಅಪಘಾತಕ್ಕೆ ಬ್ರೇಕ್ ಫೇಲ್ಯೂರ್ ಕಾರಣವಾ ಎನ್ನುವ ಬಗ್ಗೆ ಸಹ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿ ಅಷ್ಟೊಂದು ಸ್ಪೀಡಾಗಿ ಕಾರ್ ಓಡಿಸಲು ಅಮಲಿನಲ್ಲಿದ್ದನಾ ಎಂಬ ಬಗ್ಗೆ ಸಹ ಪೊಲೀಸರು ವರದಿ ಕೇಳಿದ್ದರು. ಅಲ್ಲದೆ ಡ್ರಗ್ ಟೆಸ್ಟ್ ಗೆ ಸಹ ನಿಡಲಾಗಿದ್ದು, ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ.