– 100 ಯೂನಿಟ್‌ಗಿಂತ ಹೆಚ್ಚು ಬಳಸಿದ್ರೆ ಯೂನಿಟ್‌ಗೆ 1.10 ರೂ. ಇಳಿಕೆ
ಬೆಂಗಳೂರು: 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಕರ್ನಾಟಕ ವಿದ್ಯುಚಕ್ತಿ ನಿಯಂತ್ರಣ ಆಯೋಗ (KERC) ಗುಡ್‌ನ್ಯೂಸ್ ನೀಡಿದೆ.
Advertisement
ಗೃಹ ಬಳಕೆ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 1.10 ರೂ. ಇಳಿಕೆ ಮಾಡಿದ್ದು, 100 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 1.10 ರೂ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆದಾರರಿಗೂ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 1.25 ರೂ. ಇಳಿಕೆಯಾಗಿದ್ದು, ಡಿಮ್ಯಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ. ಇಳಿಸಲಾಗಿದೆ. ಇದನ್ನೂ ಓದಿ: ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ
Advertisement
ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದು, ಏಪ್ರಿಲ್‌ನಿಂದ ನೂತನ ದರ ಅನ್ವಯವಾಗಲಿದೆ. 5 ಹೆಸ್ಕಾಂಗಳ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ವಾಣಿಜ್ಯ ಕೈಗಾರಿಕಾ ಗೃಹ ಬಳಕೆ ವಿದ್ಯುತ್ ದರದಲ್ಲಿ 100 ಯೂನಿಟ್‌ಗಳ ಹೆಚ್ಚಿನ ಬಳಕೆಗೆ ದರ ಇಳಿಕೆ ಮಾಡಲಾಗಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್ – ಅಖಿಲೇಶ್ ಯಾದವ್‌ಗೆ ಸಿಬಿಐ ಸಮನ್ಸ್
Advertisement
ಹೆಚ್.ಟಿ ಕೈಗಾರಿಕೆಯಲ್ಲಿ ಇಂಧನ ಬಳಕೆ ಶುಲ್ಕ 50 ಪೈಸೆ ಇಳಿಸಿದ್ದು, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ. ಇಳಿಕೆ ಮಾಡಿದೆ. ಅಲ್ಲದೇ ಹೆಚ್.ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಸಿದ್ದು, ಡಿಮ್ಯಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ. ಇಳಿಸಲಾಗಿದೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ
Advertisement
ಹೆಚ್.ಟಿ ಖಾಸಗಿ ಏತ ನೀರಾವರಿಯಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 200 ಪೈಸೆ ಇಳಿಕೆ ಮಾಡಲಾಗಿದೆ. ಹೆಚ್.ಟಿ ನಿವಾಸ ಅಪಾರ್ಟ್ಮೆಂಟ್‌ಗಳಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು 10 ರೂ. ಇಳಿಕೆ ಮಾಡಲಾಗಿದೆ. ಎಲ್.ಟಿ. ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಸಲಾಗಿದೆ. ಎಲ್.ಟಿ.ಕೈಗಾರಿಕಾ ಸ್ಥಾವರಗಳಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 100 ಪೈಸೆ ಇಳಿಸಲಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?