– ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದ ವಿದೇಶಾಂಗ ಸಚಿವ
ಚಿಕ್ಕೋಡಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ (Narendra Modi) ದೇಶಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (S Jaishankar) ಶ್ಲಾಘಿಸಿದರು.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಖಾಸಗಿ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್
Advertisement
Advertisement
ಭಾರತದ ಪ್ರಜೆಗಳಿಗೆ ಪ್ರಧಾನಿ ಮೋದಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಮುದ್ರಾ, ಉಜ್ವಲಾ ಯೋಜನೆ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನ ನೀಡಿದ್ದಾರೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಅನ್ನೋದು ಬಹಳ ಪ್ರಭಾವ ಬೀರಿದೆ. ಅಮೆರಿಕಕ್ಕಿಂತಲೂ ಭಾರತದಲ್ಲಿ ಡಿಜಿಟಲ್ ಹೆಚ್ಚು ಉಪಯೋಗವಾಗ್ತಿದೆ. ಕೋವಿಡ್ ಬಂದಾಗ ಭಾರತ ನಷ್ಟ ಅನುಭವಿಸಲಿದೆ ಎಂದು ಪಾಶ್ಚಿಮಾತ್ಯ ದೇಶಗಳು ಟೀಕಿಸಿದ್ದವು. ವಾಕ್ಸಿನ್ ಅಂತೂ ಬಹಳ ಕಷ್ಟದ ಮಾತಾಗಿತ್ತು. ಆದ್ರೆ ಭಾರತ ತನ್ನ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್ ನೀಡುವಲ್ಲಿ ಯಶಸ್ವಿಯಾಯ್ತು. ಇಂದು ಭಾರತದ ಪ್ರಗತಿ ಹಾಗೂ ಉನ್ನತಿ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದರು.
Advertisement
Advertisement
ಶಿಕ್ಷಣದಿಂದ ಮಾತ್ರ ಒಂದು ದೇಶ ಬಹಳ ಉನ್ನತಿ ಹೊಂದಲು ಸಾಧ್ಯ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಪ್ರತಿದಿನ ಭಾರತದಲ್ಲಿ 30 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತೆ. ವಾರಕ್ಕೊಂದರಂತೆ ಭಾರತದಲ್ಲಿ ಹೊಸ ವಿಶ್ವವಿದ್ಯಾಲಯ ಪ್ರಾರಂಭವಾಗ್ತಿದೆ. ಇವೆಲ್ಲವೂ ಸರ್ಕಾರ ಮಾಡಲೇಬೇಕಾದ ಕೆಲಸಗಳು. ಮುಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಆಗಲಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಾಂತ್ರಿಕತೆ, ಎಲೆಕ್ಟ್ರಿಕಲ್ ವಾಹನ ಈ ಜನರೇಷನ್‌ನ ನಾಡಿಮಿಡಿತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ
ಭಾರತದಲ್ಲಿ ಮೊದಲು 77 ಪಾಸ್‌ಪೋರ್ಟ್ ಕೇಂದ್ರಗಳಿದ್ದವು. ಈಗ 575 ಪಾಸ್‌ಪೋರ್ಟ್ ಕೇಂದ್ರಗಳಿವೆ. ಕೋಟ್ಯಂತರ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರನ್ನು ವಂದೇ ಭಾರತ ಎಂಬ ವೇದಿಕೆಯಡಿಯಲ್ಲಿ ಒಗ್ಗೂಡಿಸಲಾಗಿದೆ. ವಿದೇಶಗಳಲ್ಲಿ ಅನೇಕ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ನೆಲೆಸುವ ಪ್ರತಿಯೊಬ್ಬ ಭಾರತೀಯನನ್ನ ಕಾಪಾಡುವುದು ನಮ್ಮ ಕರ್ತವ್ಯ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳೆಯರು ಏನನ್ನು ಧರಿಸಬೇಕು ಅನ್ನೋದು ಅವರ ವೈಯಕ್ತಿಕ ವಿಚಾರ – ಹಿಜಬ್ ಬಗ್ಗೆ ಕೇಳಿದ್ದಕ್ಕೆ ರಾಹುಲ್ ಉತ್ತರ