ಬೆಂಗಳೂರು: ವಿದ್ಯುತ್ ಬಿಲ್(Electricity Bill) ಕಟ್ಟಲು ವಿಳಂಬ ಮಾಡುವವರಿಗೆ ಬೆಸ್ಕಾಂ(BESCOM) ಶಾಕ್ ನೀಡಲು ಮುಂದಾಗಿದೆ.
ಇನ್ಮುಂದೆ ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಫ್ಯೂಸ್ ಕಿತ್ತುಕೊಂಡು ಹೋಗುವುದಿಲ್ಲ. ಬದಲಾಗಿ ಸಂಪರ್ಕವೇ ಕಡಿತ ಮಾಡಲು ಮುಂದಾಗಿದೆ. ಇದನ್ನೂ ಓದಿ: ಹೌದು, ಸಿನಿಮಾ ರಂಗದಿಂದ ನನ್ನನ್ನು ದೂರಿಡಲಾಗುತ್ತಿದೆ: ಪ್ರಕಾಶ್ ರೈ
Advertisement
ಮೂರು ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಕಠಿಣ ಕ್ರಮಕ್ಕೆ ಮುಂದಾಗಿದ್ದು ಮನೆಯ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ಇದನ್ನೂ ಓದಿ: ಭಾರೀ ಸಾಲದ ಸುಳಿಯಲ್ಲಿ KPTCL, ವಿದ್ಯುತ್ ಕಂಪನಿಗಳು: ಯಾವ ಕಂಪನಿಯದ್ದು ಎಷ್ಟು ಸಾಲ?
Advertisement
ಒಮ್ಮೆ ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಸ್ಕಾಂ ನೂತನ ಶಿಕ್ಷೆಯ ಪ್ರಯೋಗಕ್ಕೆ ಮುಂದಾಗಿದೆ.