CinemaKarnatakaLatestMain PostSandalwood

ಹೌದು, ಸಿನಿಮಾ ರಂಗದಿಂದ ನನ್ನನ್ನು ದೂರಿಡಲಾಗುತ್ತಿದೆ: ಪ್ರಕಾಶ್ ರೈ

ನ್ನಡದ ಪ್ರತಿಭಾವಂತ ನಟ ಪ್ರಕಾಶ್ ರೈ. ಪರಭಾಷೆಯಲ್ಲೂ ಅಷ್ಟೇ ವರ್ಚಸ್ಸು ಹೊಂದಿದವರು. ಭಾರತೀಯ ಸಿನಿಮಾ ರಂಗದ ಮೇರು ನಟರಾಗಿ ಗುರುತಿಸಿಕೊಂಡವರು. ಅಂತಹ ಪ್ರಕಾಶ್ ರೈ ಇದೀಗ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಾವು ರಾಜಕೀಯ ಪ್ರವೇಶ ಮಾಡಿದ ನಂತರ ಮತ್ತು ತಮ್ಮ ವಿರೋಧಿಗಳನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಅವರು ವೃತ್ತಿ ಬದುಕಿನಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದಾರಂತೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಕಾಶ್ ರೈ, ‘ತಮ್ಮ ಸಿದ್ಧಾಂತ ಮತ್ತು ನಿಲುವುಗಳ ಕಾರಣದಿಂದಾಗಿ ತಮ್ಮೊಂದಿಗೆ ನಟಿಸಲು ಅನೇಕರು ಹಿಂಜರಿಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ರಂಗದಿಂದಲೇ ತಮ್ಮನ್ನು ದೂರ ಇಡುವ ಹುನ್ನಾರವೂ ನಡೆದಿದೆ ಎಂದು ಬಹಿರಂಗವಾಗಿಯೇ ಅವರು ಮಾತನಾಡಿದ್ದಾರೆ. ಈ ಹಿಂದೆ ಪ್ರಧಾನಿಗೆ ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ಪ್ರಶ್ನೆ ಕೇಳಿದರು ಎನ್ನುವ ಕಾರಣಕ್ಕಾಗಿ ಕೆಲ ಜಾಹೀರಾತುಗಳಿಂದ ಅವರನ್ನು ಕೈ ಬಿಟ್ಟರು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

ಸಿನಿಮಾ ರಂಗದಿಂದ ದೂರ ಇಡುವಂತಹ ಕೆಲಸವನ್ನು ಮೊದಲ ಮಾಡಿದ್ದು ಬಾಲಿವುಡ್. ಪ್ರಕಾಶ್ ರೈ ಅವರನ್ನು ಬಾಲಿವುಡ್ ನ ಅನೇಕ ಸಿನಿಮಾಗಳಿಂದ ಕೈ ಬಿಡಲಾಯಿತು. ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲು ಎಷ್ಟೋ ನಿರ್ದೇಶಕರು ಹಿಂಜರಿದರು. ಅಲ್ಲದೇ, ಅನೇಕ ಜಾಹೀರಾತುಗಳಿಂದಲೂ ಪ್ರಕಾಶ್ ರೈ ಅವರನ್ನು ಕೈ ಬಿಡಲಾಯಿತು. ಇದೀಗ ಆ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಕಾರಣಕ್ಕಾಗಿ ಪ್ರಕಾಶ್ ರೈ ಮೊದಲ ಬಾರಿಗೆ ಬಹಿರಂಗವಾಗಿ ಈ ಮಾತುಗಳನ್ನು ಆಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button