ಬೆಂಗಳೂರು: ನಡು ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹೊತ್ತಿ ಉರಿದ ಘಟನೆ ಆರ್‌ಆರ್ ನಗರದ (RR Nagara) ಬೆಮೆಲ್ ಲೇಔಟ್ ರಸ್ತೆಯಲ್ಲಿ ನಡೆದಿದೆ.
ಶಿವಾನಂದ ಎಂಬುವರು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಆರ್‌ಆರ್ ನಗರದ ಕಚೇರಿಗೆ ಬಂದಿದ್ದರು. ನಂತರ ಕಚೇರಿಯಿಂದ ನಾಗರಭಾವಿಗೆ ತೆರಳಲು ಸ್ಕೂಟರ್ ತೆಗೆದು ಹೊರ ಬರುವಾಗ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತೆ, ಕಟುಕರಿಗಲ್ಲ: ಹೆಚ್‌ಡಿಕೆ
ಹೊಗೆ ಬರುತ್ತಿರುವುದನ್ನು ನೋಡಿ ರಸ್ತೆ ಬದಿ ಶಿವಾನಂದ ಸ್ಕೂಟರ್ ನಿಲ್ಲಿಸಿದ್ದಾರೆ. ಈ ವೇಳೆ ಕ್ಷಣ ಮಾತ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಸ್ಥಳೀಯರು ಬ್ಯಾಟರಿ ಹೊರ ತೆಗೆದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಪಟಾಕಿ – ಪುಂಡರಿಂದ ವಾಹನಗಳಿಗೆ ಕಿರಿಕ್
ಎಲೆಕ್ಟ್ರಿಕ್ ಬೈಕ್ ಸುಟ್ಟು ಕರಕಲಾಗಿದ್ದು ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.