ಶಿವಮೊಗ್ಗ: ರೈಲ್ವೆ ಹಳಿ (Railway Track) ಮೇಲೆ ವಿದ್ಯುತ್ ತಂತಿ (Electric Wire) ತುಂಡಾಗಿ ಬಿದ್ದಿದ್ದರಿಂದ ಕೆಲಕಾಲ ರೈಲು ಸಂಚಾರ ವ್ಯತ್ಯಯ ಉಂಟಾಗಿದ್ದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಬಳಿ ನಡೆದಿದೆ.
ಆನಂದಪುರ ಸಮೀಪ ರೈಲ್ವೆ ಹಳಿ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ಸಿಬ್ಬಂದಿ ಇದನ್ನು ಗಮನಿಸಿ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು. ಬೆಳಗ್ಗೆ 5:15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್‌ಸಿಟಿ ರೈಲು ಬೆಳಗ್ಗೆ 6:05ಕ್ಕೆ ಆನಂದಪುರಕ್ಕೆ ತಲುಪಿ, ಅಲ್ಲಿಯೇ ನಿಂತಿತ್ತು. ಹಳಿ ಮೇಲೆ ಬಿದ್ದಿದ ವಿದ್ಯುತ್ ತಂತಿ ತೆರವುಗೊಳಿಸಿ ರಿಪೇರಿ ಕಾರ್ಯ ನಡೆಸಲಾಯಿತು. ಎರಡೂವರೆ ಗಂಟೆ ಬಳಿಕ 8:39ಕ್ಕೆ ರೈಲು ಸಂಚಾರ ಆರಂಭಿಸಿದೆ. ಇದನ್ನೂ ಓದಿ: ಶುಕ್ರವಾರ ಐತಿಹಾಸಿಕ ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ ಕಲರವ
7 ಗಂಟೆಗೆ ಶಿವಮೊಗ್ಗ ನಿಲ್ದಾಣ ತಲುಪಬೇಕಿದ್ದ ರೈಲು 10 ಗಂಟೆ ಹೊತ್ತಿಗೆ ತಲುಪಿದೆ. ತಾಳಗುಪ್ಪದವರೆಗೆ ರೈಲ್ವೆ ಲೇನ್ ವಿದ್ಯುದೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದರ ತಂತಿ ತುಂಡಾಗಿ ರೈಲ್ವೆ ಲೇನ್ ಮೇಲೆ ಬಿದ್ದಿತ್ತು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ಕೈಗೊಂಡು ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ
Web Stories