ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳ ಟೆಂಪಲ್ ರನ್

Public TV
1 Min Read
TEMPLE VISIT

ಬೆಂಗಳೂರು: ಪಂಚರಾಜ್ಯಗಳ ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳ ಟೆಂಪಲ್ ರನ್ ಜೋರಾಗಿದೆ.

CAHARAN JITH SINGH CHENNAI

ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾದಲ್ಲಿ ಪ್ರಬಲ ಅಭ್ಯರ್ಥಿಗಳ ದಂಡು ಮತ ಎಣಿಕೆ ಆರಂಭಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಕಂಡುಬಂತು. ಇದನ್ನೂ ಓದಿ: ಪಂಜಾಬ್‌ ಚುನಾವಣೆ : ಆರಂಭದ ಮತ ಎಣಿಕೆಯಲ್ಲಿ ಆಪ್‌ ಮುನ್ನಡೆ

ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಗುರುದ್ವಾರದಲ್ಲಿ ತಮ್ಮ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಇಂಫಾಲ್‍ನ ಶ್ರೀಗೋವಿಂದಜೀ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದರೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಶ್ರೀದತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದನ್ನೂ ಓದಿ: Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP

ಲಕ್ನೋದಲ್ಲಿ ಬಿಜೆಪಿ ನಾಯಕ ರಾಜೇಶ್ವರ್ ಸಿಂಗ್ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನೆರವೇರಿಸಿದರೆ, ಪಂಜಾಬ್‍ನ ಎಎಪಿ ನಾಯಕ ಭಗವಂತ್ ಮಾನ್ ಗುರುದ್ವಾರ ಗುರುಸಾಗರ್ ಮಸ್ತುವಾನಾ ಸಾಹಿಬ್ ದೇವಸ್ಥಾನ ಸಂಗ್ರೂರ್‌ನಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿ ಫಲಿತಾಂಶದತ್ತ ಗಮನ ಹರಿಸಿದ್ದಾರೆ.

Share This Article