2014ರ ಲೋಕಸಭಾ ಚುನಾವಣೆಯೂ ಹಲವು ವಿಶೇಷತೆಗಳಿಂದ ಕೂಡಿತ್ತು. ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅಂದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದರೆ, ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ 1,499 ಮತಗಳ ಅಂತರದಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಇಲ್ಲಿ ಕಡಿಮೆ ಅಂತರದಿಂದ ಜಯಗಳಿಸಿದ ರಾಜ್ಯದ ನಾಯಕರ ಪಟ್ಟಿಯಲ್ಲಿ ನೀಡಲಾಗಿದೆ.
1. ಬಿ.ವಿ.ನಾಯಕ್: ರಾಯಚೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಬಿ.ವಿ.ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ವಿರುದ್ಧ ಕೇವಲ 1,499 (0.16%) ಮತಗಳ ಅಂತರದಲ್ಲಿ ಜಯ ಪಡೆದಿದ್ದರು. ಬಿ.ವಿ ನಾಯಕ್ 4,43,659 ಮತಗಳು ಪಡೆದರೆ, ಶಿವನಗೌಡ ನಾಯಕ್ 4,42,160 ಮತಗಳನ್ನು ಪಡೆದಿದ್ದರು.
Advertisement
2. ಪ್ರಕಾಶ್ ಹುಕ್ಕೇರಿ: ಚಿಕ್ಕೋಡಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ಪ್ರಕಾಶ್ ಹುಕ್ಕೇರಿ 4,74,373 ಮತಗಳನ್ನು ಪಡೆದು ಬಿಜೆಪಿ ಆಭ್ಯರ್ಥಿಯಾಗಿದ್ದ ರಮೇಶ್ ಕತ್ತಿ ಅವರ ವಿರುದ್ಧ 3,003 (0.28%) ಮತಗಳ ಅಂತರದಿಂದ ಗೆಲುವಿನ ಮಾಲೆ ಧರಿಸಿದ್ದರು. ರಮೇಶ್ ಕತ್ತಿ 4,71,370 ಮತಗಳನ್ನು ಪಡೆದಿದ್ದರು.
Advertisement
Advertisement
3. ವೀರಪ್ಪ ಮೊಯ್ಲಿ: ಚಿಕ್ಕಬಳ್ಳಾಪುರ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ ಪಕ್ಷದ ವೀರಪ್ಪ ಮೊಯ್ಲಿ 4,24,800 ಮತ ಪಡೆದು ಬಿಜೆಪಿ ಪಕ್ಷದ ಬಿ.ಎನ್.ಬಚ್ಚೇಗೌಡ ಅವರ ವಿರುದ್ಧ 9,590 (0.76%) ಅಂತರದಿಂದ ಗೆಲುವು ಪಡೆದಿದ್ದರು. 4,15,280 ಮತಗಳು ಪಡೆದಿದ್ದ ಬಚ್ಚೇಗೌಡರು ಸೋಲಿನ ರುಚಿ ಕಂಡಿದ್ದರು.
Advertisement
4. ಸಿ.ಎಸ್.ಪುಟ್ಟರಾಜು: ಮಂಡ್ಯ ಸಾಮಾನ್ಯ ಕ್ಷೇತ್ರದಲ್ಲಿ 5,24,370 ಮತಗಳು ಪಡೆದಿದ್ದ ಸಿಎಸ್ ಪುಟ್ಟರಾಜು ಅವರು 5,18,852 ಮತಗಳನ್ನು ಪಡೆದಿದ್ದ ರಮ್ಯಾರನ್ನು ಕೇವಲ 5,518 (0.47%) ಮತಗಳ ಅಂತರಗಳಲ್ಲಿ ಸೋಲಿಸಿದ್ದರು.
5. ಜಿ.ಎಂ.ಸಿದ್ದೇಶ್ವರ್: ದಾವಣಗೆರೆ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಂ.ಸಿದ್ದೇಶ್ವರ್ 5,18,894 ಮತ ಪಡೆದು ಕಾಂಗ್ರೆಸ್ ಪಕ್ಷದ ಎಸ್.ಎಸ್.ಮಲ್ಲಿಕಾರ್ಜುನ್ ರನ್ನು ಸೋಲಿಸಿದ್ದರು. 5,01,287 ಮತ ಪಡೆದಿದ್ದ ಮಲ್ಲಿಕಾರ್ಜುನ್ 17,607 (1.59%) ಮತಗಳ ಅಂತರದಲ್ಲಿ ಸೋಲುಂಡಿದ್ದರು.
6. ಪ್ರತಾಪ್ ಸಿಂಹ: ಮೈಸೂರು-ಕೊಡಗು ಸಾಮಾನ್ಯ ಕ್ಷೇತ್ರದ ಪ್ರತಾಪ್ ಸಿಂಹ ಅವರು ಎದುರಾಳಿ ಕಾಂಗ್ರೆಸ್ ಪಕ್ಷದ ಎ.ಎಚ್ ವಿಶ್ವನಾಥ್ ರನ್ನು 31,608 (2.75%) ಮಾರ್ಜಿನ್ ನಿಂದ ಸೋಲಿಸಿದ್ದರು. ಪ್ರತಾಪ್ ಸಿಂಹ 5,03,908 ಮತಗಳನ್ನು ಪಡೆದರೆ, ಎ.ಎಚ್.ವಿಶ್ವನಾಥ್ 4,72,300 ಪಡೆದಿದ್ದರು.
7. ಕೆ.ಎಚ್.ಮುನಿಯಪ್ಪ: ಕೋಲಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕೆ.ಎಚ್.ಮುನಿಯಪ್ಪ 48,850 (4.26%) ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಕೆಎಚ್ ಮುನಿಯಪ್ಪ ಎದುರಾಳಿ ಕೋಲಾರ ಕೇಶವ್ 3,71,076 ಮತ ಪಡೆದರೆ, ಕೆಎಚ್ ಮುನಿಯಪ್ಪ 4,18,926 ಮತ ಪಡೆದಿದ್ದರು.
8. ಮುದ್ದಹನುಮೇಗೌಡ: ತುಮಕೂರು ಸಾಮಾನ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು 4,29,868 ಮತ ಪಡೆದು ಬಿಜೆಪಿಯ ಬಿಎಸ್ ಬಸವರಾಜು ಅವರ ವಿರುದ್ಧ 74,041 (6.80%) ಮತಗಳ ಅಂತರದ ಗೆಲುವು ಪಡೆದಿದ್ದರು. ಬಿಜೆಪಿಯ ಜಿ.ಎಸ್.ಬಸವರಾಜು 3,55,827 ಮತ ಪಡೆದಿದ್ದರು.
9. ಸುರೇಶ್ ಅಂಗಡಿ: ಬೆಳಗಾವಿ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಜೆಪಿಯ ಸುರೇಶ್ ಅಂಗಡಿ 5,54,417 ಮತ ಪಡೆದು 4,78,557 ಮತಗಳು ಪಡೆದಿದ್ದ ಕಾಂಗ್ರೆಸ್ ಪಕ್ಷದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು 75,860 (7.11%) ಮತಗಳ ಅಂತರದಿಂದ ಸೋಲಿಸಿದ್ದರು.
10. ರಮೇಶ್ ಜಿಗಜಿಣಗಿ: ವಿಜಯಪುರ ಪರಿಶಿಷ್ಟ ಪಂಗಡ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ 4,71,757 ಮತ ಪಡೆದು ಕಾಂಗ್ರೆಸ್ ಪಕ್ಷದ ಪ್ರಕಾಶ್ ರಾಠೋಡ ವಿರುದ್ಧ ಗೆಲುವು ಪಡೆದಿದ್ದರು. 4,01,938 ಮತ ಪಡೆದಿದ್ದ ಪ್ರಕಾಶ್ ರಾಠೋಡ 69,819 (7.28%) ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.