– ಜಯಲಲಿತಾ ಕ್ಷೇತ್ರದ ಉಪಸಮರಕ್ಕೆ ಎರಡೆಲೆ ಇಲ್ಲ
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾಗಿರೋ ಚೆನ್ನೈನ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಮಾನ್ಯತೆಯನ್ನೇ ಕಳೆದುಕೊಂಡಿದೆ.
ಎಐಎಡಿಎಂಕೆ ಪಕ್ಷದ ಚಿಹ್ನೆ ತಮಗೆ ನೀಡುವಂತೆ ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದ್ರೆ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎರಡೂ ಬಣಕ್ಕೂ ಎಐಎಡಿಎಂಕೆ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸಿದೆ. ಅಲ್ಲದೆ ಎಐಎಡಿಎಂಕೆ ಪಕ್ಷದ ವಿಸ್ತøತ ಹೆಸರನ್ನು ಚುನಾವಣೆಯಲ್ಲಿ ಬಳಸುವಂತಿಲ್ಲ ಎಂದು ಹೇಳಿದೆ.
Advertisement
ಸದ್ಯ ಪಕ್ಷದ ಚಿಹ್ನೆಯನ್ನ ಚುನಾವಣಾ ಆಯೋಗ ತಡೆ ಹಿಡಿದಿದೆ. ಹೀಗಾಗಿ ಆರ್‍ಕೆ ನಗರ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಹಾಗೂ ಸೆಲ್ವಂ ಬಣದ ಅಭ್ಯರ್ಥಿ ಮಧುಸೂದನನ್ ಬೇರೆ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Advertisement
ಏಪ್ರಿಲ್ 12ರಂದು ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.