ಯಾದಗಿರಿ: ಯಾದಗಿರಿ ಪಂಚಾಯ್ತಿ ಉಪಚುನಾವಣೆಯ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಸುರಪೂರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಆರ್.ಆನಂದ(58) ಎಂಬವರನ್ನ ಕೆಂಭಾವಿ ಉಪತಹಶೀಲ್ದಾರ್ ಉಪಚುನಾವಣೆಯ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಇಂದು ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಹದನೂರ ಗ್ರಾಮದ ವಾಡ್9 ನಂ. 5ರ ಮತ ಏಣಿಕೆ ಪ್ರಕ್ರಿಯೆ ಪ್ರಾರಂಭವಾದ ನಂತರ ಅರ್.ಆನಂದ ಕೊಠಡಿಯ ಹೊರಗಡೆ ಟೀ ಕುಡಿಯುತ್ತಿರವಾಗ ಹೃದಘಾತ ಸಂಭವಿಸಿದೆ.
ಆನಂದ ಅವರನ್ನ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ ಸಾವನ್ನಪ್ಪಿದ್ದಾರೆ. ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.