ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆಲುವಿಗೆ ಚುನಾವಣಾ ಅಧಿಕಾರಿಗಳು ತಡೆ ನೀಡಿದ್ದಾರೆ.
ಬಿಜೆಪಿಯಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಿದ್ರು. ಇವಿಎಂ ಮಷೀನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆಯನ್ನು ತಡೆ ಹಿಡಿದಿದ್ದಾರೆ.
Advertisement
ಇವಿಎಂ ಯಂತ್ರದಲ್ಲಿ ದಾಖಲಾಗಿರುವ ಮತಗಳು ಮತ್ತು ವಿವಿ ಪ್ಯಾಟ್ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ವೋಟ್‍ಗಳ ಪುನರ್ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಕೆಲ ವಿವಿ ಪ್ಯಾಟ್ ಹಾಳೆಗಳು ಮುದ್ರಣವಾಗದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
Advertisement
ಹು-ಧಾ ಸೆಂಟ್ರಲ್ ಕ್ಷೇತ್ರದ ಮತದಾನದಲ್ಲಿ ಎಣಿಕೆಯಲ್ಲಿ ತಪ್ಪಾಗಿದ್ದು, ಸ್ಲೀಪ್ ಕವರ್‍ಗಳ ಮೇಲ್ ಸೀಲ್ ಇರಲಿಲ್ಲ. ಆದ್ರೆ ಸೀಲ್ ಇರುವ ಕವರ್ ಗಳಲ್ಲಿ ಖಾಲಿ ಸ್ಲೀಪ್‍ಗಳು ಕಂಡು ಬಂದಿದ್ದು, ಮಷೀನ್ ನಲ್ಲಿ ದಾಖಲಾದ ಮತದ ಸಂಖ್ಯೆ ಮತ್ತು ಪೂಲಿಂಗ್ ಆಫೀಸರ ಕೊಟ್ಟ ಸಂಖ್ಯೆಗೆ ವ್ಯತ್ಯಾಸವಿದೆ. ಇವಿಎಂ ಸಂಖ್ಯೆ 135 (ಎ) ತೆಗಿಸಿದಾಗ 450 ಮತ ಬಂದಿವೆ, ಆದ್ರೆ ವಿವಿ ಪ್ಯಾಟ್‍ದಲ್ಲಿ 459 ಮತ ಬಂದಿದ್ದು 204 ಖಾಲಿ ಹಾಳೆ ಬಿದ್ದಿವೆ. ಮಷಿನ್ ನಲ್ಲಿ 91 ಮತ ನನಗೆ ಬಿದ್ದಿದ್ರೆ, ವಿವಿ ಪ್ಯಾಟ್ ನಲ್ಲಿ 89 ತೋರಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ್ ಆರೋಪಿಸಿದ್ದಾರೆ.
Advertisement
ಹು-ಧಾ ಸೆಂಟ್ರಲ್ ಕ್ಷೇತ್ರದ ಫಲಿತಾಂಶ ಘೋಷಣೆ ಮಾಡಬಾರದು ಹಾಗು ಮರು ಎಣಿಕೆ ನಡೆಸಬೇಕು. ಈ ಕೆಲಸದಲ್ಲಿ ಬಿಜೆಪಿಯ ಕೈವಾಡವಿದ್ದು, ಇದೆಲ್ಲ ಗೊತ್ತಿದ್ದರಿಂದ ಅಮಿತ್ ಶಾ ಸಹ ಕೇವಲ ಅಭ್ಯರ್ಥಿ ಹಾಕಿ ಅಂದಿದ್ರು. ನಾವು ಮರು ಎಣಿಕೆಗೆ ಒತ್ತಾಯ ಮಾಡಿದ್ದೇವೆ ಅಂತಾ ಮಹೇಶ್ ನಾಲವಾಡ್ ಹೇಳಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ಇವಿಎಂ ಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಆರೋಪಗಳನ್ನು ಮಾಡ್ತಿದೆ. 20 ಸಾವಿರ ಮತಗಳ ಅಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೇನೆ. ಇವಿಎಂ ಮತ್ತು ವಿವಿ ಪ್ಯಾಟ್ ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ಚುನಾವಣಾ ಅಧಿಕಾರಿಗಳು ಬಗೆಹರಿಸುತ್ತಾರೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.