– ಪಶ್ಚಿಮ ಬಂಗಾಳದ ಡಿಜಿಪಿ ವರ್ಗಾವಣೆಗೆ ನಿರ್ದೇಶನ
– ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಮಹತ್ವದ ನಿರ್ಧಾರ
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ (Lok Sabha Elections) ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಚುನಾವಣಾ ಆಯೋಗ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು (Home Secretaries) ಪದಚ್ಯುತಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಪಶ್ಚಿಮ ಬಂಗಾಳದ ಪೊಲೀಸ್ ಮಹಾ ನಿರ್ದೇಶಕರನ್ನೂ ವರ್ಗಾವಣೆ ಮಾಡುವಂತೆ ಚುನಾವಣಾ ಸಮಿತಿ ನಿರ್ದೇಶನ ನೀಡಿದೆ. ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್ ಕುಮಾರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ (Mamata Banerjee) ಆಪ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
Advertisement
ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್ ಕುಮಾರ್, ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗವು (Election Commission) ಪದಚ್ಯುತಿಗೊಳಿಸಿದೆ. ಅಷ್ಟೇ ಅಲ್ಲ, ಹಿಮಾಚಲ ಪ್ರದೇಶ ಹಾಗೂ ಮಿಜೋರಾಂನ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?
Advertisement
Advertisement
ಇದರೊಂದಿಗೆ ಬೃಹನ್ ಮುಂಬೈ ನಗರ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಹಾಗೂ ಮಹಾರಾಷ್ಟ್ರದ ಪುರಸಭೆಯಲ್ಲಿನ ಇತರ ಅಧಿಕಾರಿಗಳನ್ನೂ ಪದಚ್ಯುತಿಗೊಳಿಸಿದೆ. ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಮೂರು ವರ್ಷ ಅಧಿಕಾರ ಸಲ್ಲಿಸಿದ್ದರೆ, ಅವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಬೇಕು. ಅವರನ್ನು ನಿಯಮಿತವಾಗಿ ವರ್ಗಾವಣೆ ಮಾಡಬೇಕು ಎಂದು ಇದಕ್ಕೂ ಮೊದಲು ಚುನಾವಣೆ ಆಯೋಗವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಈ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿದೆ.
Advertisement
ಕೆಲ ನಗರ ಪಾಲಿಕೆಗಳ ಆಯುಕ್ತರು, ಉಪ ಆಯುಕ್ತರನ್ನು ಕೂಡ ವರ್ಗಾಯಿಸಬೇಕು ಎಂದು ಕೂಡ ಚುನಾವಣಾ ಆಯೋಗವು ನಿರ್ದೇಶನ ನೀಡಿತ್ತು. ಆದರೆ, ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Koppal Lok Sabha 2024: ಹನುಮನ ಕೃಪ ಕಟಾಕ್ಷ ಯಾರ ಮೇಲೆ?
ದೀದಿ ಸರ್ಕಾರದಿಂದ ನೋ ರಿಯಾಕ್ಷನ್:
ಮಮತಾ ಬ್ಯಾನರ್ಜಿ ಅವರ ನಿಕಟರ್ತಿ ಎಂದೇ ಕರೆಸಿಕೊಂಡಿರುವ ಡಿಜಿಪಿ ರಾಜೀವ್ ಮಲಿಕ್ ಅವರ ಪದಚ್ಯುತಿ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚುನಾವಣಾ ಸಂದರ್ಭಗಳಲ್ಲಿ ಪಶ್ಚಿಮ ಬಂಗಾಳವು ಆಗಾಗ್ಗೆ ಹಿಂಸಾಚಾರಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಜೂನ್ ನಲ್ಲಿ ನಡೆ ಪಂಚಾಯತ್ ಚುನಾವಣೆ ವೇಳೆಯೂ ಹಿಂಸಾಚಾರ ನಡೆದು ಒಂದು ಡಜನ್‌ಗೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಪ್ರತಿಪಕ್ಷಗಳು ಹಿಂಸಾಚಾರ ಪ್ರಚೋದಿಸುತ್ತಿವೆ ಎಂದು ತೃಣಮೂಲ ಆರೋಪಿಸಿತ್ತು. ಇದನ್ನೂ ಓದಿ: ಕೃಷಿ ವಲಯಕ್ಕೂ ಬಂತು AI – ಬೆಳೆಗಳಿಗೆ ತಗುಲುವ ರೋಗದ ಬಗ್ಗೆ ಮೊದಲೇ ಎಚ್ಚರಿಸುತ್ತೆ IOT