ನವದೆಹಲಿ: ಚುನಾವಣೆ(Election) ವೇಳೆ ರಾಜಕೀಯ ಪಕ್ಷಗಳು(Political Parties) ಘೋಷಿಸುವ ಉಚಿತ ಕೊಡುಗೆಗಳ ವಿಚಾರ ಚರ್ಚೆ ಆಗುತ್ತಿರುವ ಸಂದರ್ಭದಲ್ಲೇ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ(Election Commission) ಬಿಗ್ ಶಾಕ್ ನೀಡಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಮಾಡುವ ವಾಗ್ದಾನಗಳು, ಅವುಗಳ ಜಾರಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳ ಕುರಿತಾಗಿ ಜನಕ್ಕೆ ಮೊದಲೇ ಮಾಹಿತಿ ನೀಡಬೇಕು ಎಂದು ಹೇಳಿದೆ.
Advertisement
Advertisement
ಈ ಮಾಹಿತಿ ಆಧಾರದಲ್ಲಿ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಮತದಾರರಿಗೆ ಅನುಕೂಲವಾಗಲಿದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ. ಈ ಪ್ರಸ್ತಾಪದ ಬಗ್ಗೆ ಅಕ್ಟೋಬರ್ 18 ರೊಳಗೆ ಅಭಿಪ್ರಾಯ ತಿಳಿಸಿ ಎಂದು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ. ಇದಕ್ಕೆ ಬಿಜೆಪಿಯೇತರ ರಾಜಕೀಯ ಪಕ್ಷಗಳು ಗರಂ ಆಗಿದೆ.
Advertisement
ಕಾಂಗ್ರೆಸ್ ಪಕ್ಷದ ಜೈರಾಂ ರಮೇಶ್, ಇದು ಚುನಾವಣಾ ಆಯೋಗದ ಕೆಲಸವಲ್ಲ. ಪೈಪೋಟಿಯೇ ರಾಜಕೀಯ ಪಕ್ಷಗಳ ಸಾರ ಮತ್ತು ಸ್ಪೂರ್ತಿ. ಇದೇನಾದ್ರೂ ಜಾರಿಗೆ ಬಂದಲ್ಲಿ ಪ್ರಜಾಸತ್ತಾತ್ಮಕ ದೇಶವಾದ ಭಾರತದಲ್ಲಿ ಮತ್ತೊಂದು ಸಮಸ್ಯೆಯಾಗಲಿದೆ. ಈ ಹಿಂದೆ ಇಂತಹ ಬ್ಯೂರೋಕ್ರಟಿಕ್ ವೈಖರಿ ಇದ್ದಿದ್ದರೆ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಯೋಜನೆಗಳು ಜಾರಿಗೆ ಬರುತ್ತಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸ್ಕೂಟಿ, ಕಾರಿನ ಮಧ್ಯೆ ಭೀಕರ ಅಪಘಾತ – ಅಣ್ಣ, ತಂಗಿ ದಾರುಣ ಸಾವು
Advertisement
ಜಾರಿ ನಿರ್ದೇಶನಾಲಯ, ಸಿಬಿಐನಂತೆ ಚುನಾವಣಾ ಆಯೋಗವೂ ವರ್ತಿಸಲು ಶುರು ಮಾಡಿದಂತಿದೆ. ಚುನಾವಣಾ ಆಯೋಗ ತನ್ನ ಮಿತಿಯನ್ನು ಮೀರುತ್ತಿದೆ ಎಂದು ಶಿವಸೇನೆ ಕಿಡಿಕಾರಿದೆ.