ನವದೆಹಲಿ: ಪ್ರಧಾನಿ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಸಿನಿಮಾ ಹಾಗೂ ನಮೋ ಚಾನೆಲ್ ನಿಷೇಧದ ಬೆನ್ನಲ್ಲೇ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಪ್ರಸಾರದ ಮೇಲೆಯೂ ಚುನಾವಣಾ ಆಯೋಗ ನಿಷೇಧ ಹೇರಿ ಆದೇಶ ಹೊರಡಿಸಿದೆ.
‘ಎರೋಸ್ ನೌ’ ಡಿಜಿಟಲ್ ಮಾಧ್ಯಮವು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಆನ್‍ಲೈನ್ ಸೀರಿಸ್ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಪ್ರಸಾರ ಮಾಡುತ್ತಿದೆ. ಈ ಸೀರಿಸ್ ಪ್ರಸಾರವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸಂಸ್ಥೆಗೆ ಸೂಚನೆ ನೀಡಿದೆ.
Advertisement
Election Commission to Eros Now: It was brought to our notice that a web series "Modi-Journey of a Common Man, having 5 episodes is available on your platform. You're directed to stop forthwith the online streaming & remove all connected content of the series till further orders pic.twitter.com/ofs0neJMc3
— ANI (@ANI) April 20, 2019
Advertisement
ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಆನ್‍ಲೈನ್ ಸೀರಿಸ್ 5 ಸಂಚಿಕೆ ಹೊಂದಿದೆ. ಇದು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ನಿಮ್ಮ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿರುವ ಸೀರಿಸ್‍ಗಳನ್ನು ತೆಗೆದು ಹಾಕಬೇಕು ಎಂದು ತಿಳಿಸಿದೆ.
Advertisement
‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಆನ್‍ಲೈನ್ ಸೀರಿಸ್ ದೇಶದ ಪ್ರಧಾನಿ, ಪಕ್ಷವೊಂದರ ನಾಯಕ, ಲೋಕಸಭಾ ಚುನಾವಣೆಯ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಸಿದ ನಂತರ ನಮಗೆ ತಿಳಿದಿದೆ. ಇದರಿಂದಾಗಿ ಸೀರಿಸ್‍ನ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು ಎಂದು ಚುನಾವಣಾ ಆಯೋಗವು ಸೂಚನೆ ನೀಡಿದೆ.
Advertisement
https://twitter.com/ErosNow/status/1111863121780658176
ಮೀಡಿಯಾ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಸಮಿತಿ (ಎಂಸಿಎಂಸಿ)ಯಿಂದ ಅನುಮತಿ ಪಡೆಯದೆ ಏಪ್ರಿಲ್‍ನಲ್ಲಿ ಆನ್‍ಲೈನ್ ಎರೋಸ್‍ನೌ ವೆಬ್‍ಸೈಟ್ ಪ್ರಧಾನಿ ನರೇಂದ್ರ ಮೋದಿ ಅವರ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ ಎಂದು ಸೋಮವಾರ ದೆಹಲಿ ಸಿಇಒ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.