ಬೆಂಗಳೂರು: ಚುನಾವಣಾ ಫಲಿತಾಂಶಕ್ಕೆ (Karnataka Election Result) ಕ್ಷಣಗಣನೆ ಶುರುವಾಗಿದ್ದು, ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ನಡುವೆ ಫಲಿತಾಂಶಕ್ಕೂ ಮುನ್ನವೇ ಸಂಚಾರ ಪೊಲೀಸರು (Traffic Police) ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿದ್ದಾರೆ.
ಚುನಾವಣೆ ನೀತಿ ಸಂಹಿತೆ (Election Code of Conduct) ಜಾರಿಯಾಗಿದ್ದ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಮುಖಂಡರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಬಾಕ್ಸ್ ಆಫೀಸ್ ಬಾಚುತ್ತಿರುವ ದಿ ಕೇರಳ ಸ್ಟೋರಿ : 7 ದಿನಕ್ಕೆ ₹80 ಕೋಟಿ ಕಲೆಕ್ಷನ್
ಚುನಾವಣೆ ನೀತಿ ಸಂಹಿತೆ ವೇಳೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ರಾಜಕೀಯ ನಾಯಕರು ಸಂಚಾರ ನಿಯಮ ಉಲ್ಲಂಘಿಸಿದ್ದು, ಕಳೆದ 25 ದಿನಗಳಲ್ಲಿ ಬರೋಬ್ಬರಿ 4.12 ಲಕ್ಷ ಕೇಸ್ ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಚಾರ ಪೊಲೀಸರು 22.89 ಕೋಟಿ ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ 4 ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್- 1,500 ಪೊಲೀಸರ ನಿಯೋಜನೆ
ನೀತಿ ಸಂಹಿತೆ ವೇಳೆ ಬಿರುಸಿನ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರು ರೋಡ್ ಶೋ, ಬೈಕ್ ರ‍್ಯಾಲಿ ನಡೆಸಿದ್ದರು. ಈ ವೇಳೆ ಅತಿವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ತ್ರಿಬಲ್ ರೈಡಿಂಗ್, ಹೆಲ್ಮೇಟ್ ರಹಿತ ಚಾಲನೆ, ಮೊಬೈಲ್ ಬಳಕೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದರು.
ನಗರದ 250ಕ್ಕೂ ಹೆಚ್ಚು ಜಂಕ್ಷನ್ ನಲ್ಲಿದ್ದ ಕ್ಯಾಮಾರಾದಲ್ಲಿ ನಿಯಮ ಉಲ್ಲಂಘನೆ ದೃಶ್ಯ ಸೆರೆಯಾಗಿತ್ತು. ನಂತರ ಆ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ದಂಡ ವಿಧಿಸಿದ್ದಾರೆ.