ಲಕ್ನೋ: ಬಾಲಕಿಯ (Girl) ಮೇಲೆ ಅತ್ಯಾಚಾರ ಎಸಗಿದ್ದ ವೃದ್ಧನೊಬ್ಬ(Old Man) ಬಂಧನದ ಭೀತಿಯ ಹಿನ್ನೆಲೆಯಲ್ಲಿ ವಿಷ ಸೇವಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಮಥುರಾ ಜಿಲ್ಲೆಯಲ್ಲಿ ನಡೆದಿದೆ.
ಮಥುರಾ ಜಿಲ್ಲೆಯಲ್ಲಿ ಪ್ಯಾರೇಲಾಲ್(60) ಎಂಬಾತ 8 ವರ್ಷದ ಬಾಲಕಿಗೆ ಆಮಿಷವೊಡ್ಡಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಖಾಸಗಿ ಭಾಗಗಳಲ್ಲಿ ಮೇಣದ ಬತ್ತಿ (Candle) ಇಟ್ಟು ವಿಕೃತಿ ಮೆರೆದಿದ್ದ.
ಆದರೆ ಬಾಲಕಿ ಆಳುತ್ತಾ ತನ್ನ ಮನೆಗೆ ಓಡಿ ಬಂದು ಘಟನೆಯನ್ನು ಕುಟುಂಬಸ್ಥರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಕೋಲಾರದ JDS ಮುಖಂಡ ಸುಹೆಲ್ ದಿಲ್ ನವಾಜ್ AAP ಸೇರ್ಪಡೆ
ಪ್ರಕರಣ ದಾಖಲಾಗಿರುವ ವಿಷಯ ತಿಳಿದ ಬಳಿಕ ಪ್ಯಾರೇಲಾಲ್ ವಿಷ ಸೇವಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಲು ಹೋದಾಗ ವಿಷಯ ತಿಳಿದಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ಯಾರೇಲಾಲ್ ಸದ್ಯ ಅಪಾಯದಿಂದ ಪಾರಾಗಿದ್ದಾನೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ