ಸೌಂದರ್ಯದ ಜೊತೆ ಪ್ರತಿಭೆಯಿರೋ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ಕೊಡಗಿನ ಕುವರಿ ರೀಷ್ಮಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
Advertisement
ನಿರ್ದೇಶಕ ಪ್ರೇಮ್ ಗರಡಿಯಲ್ಲಿ ಪಳಗಿದ ಪ್ರತಿಭಾವಂತ ನಟಿ ರೀಷ್ಮಾ ನಾಣಯ್ಯ, ನಟಿಸಿರೋ ಮೊದಲ ಚಿತ್ರದಲ್ಲೇ ತಾನೆಂತಹ ನಟಿ ಅನ್ನೋದನ್ನ ಪ್ರೂವ್ ಮಾಡಿದ್ರು. ಈ ಚಿತ್ರದ ಅನಿತಾ ಪಾತ್ರಧಾರಿಯಾಗಿ ಸೈ ಎನಿಸಿಕೊಂಡರು. ಈಗ ರೀಷ್ಮಾಗಾಗಿ ಒಳ್ಳೊಳ್ಳೆ ಪಾತ್ರಗಳು ಅರಸಿ ಬರುತ್ತಿವೆ.
Advertisement
Advertisement
Advertisement
ಸದ್ಯ ನಂದಕಿಶೋರ್ ನಿರ್ದೇಶನದ `ರಾಣಾ’ ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಜೊತೆ ಲವ್‌ಸ್ಟೋರಿಯಿರೋ ರಾಣಾಗೆ ಜೋಡಿಯಾಗಿ ಸಾಥ್ ನೀಡಿದ್ದಾರೆ. ಇನ್ನು ಆ ದಿನಗಳು ಚೇತನ್ ನಟನೆಯ ʻಮಾರ್ಗʼ ಚಿತ್ರದಲ್ಲೂ ರೀಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಮಾತುಕತೆಯಲ್ಲಿದೆ. ಈ ಎರಡು ಚಿತ್ರಗಳಲ್ಲೂ ವಿಭಿನ್ನ ಪಾತ್ರದ ಮೂಲಕ ಕೊಡಗಿ ಬೆಡಗಿ ರೀಷ್ಮಾ ರಂಜಿಸೋದು ಗ್ಯಾರೆಂಟಿ. ಇದನ್ನು ಓದಿ:ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ
ಇನ್ನು ಸಾಮಾಜಿಕ ಜಾಲತಾಣದಲ್ಲೂ `ಏಕ್ ಲವ್ ಯಾ’ ನಟಿಯ ಫೀವರ್ ಜೋರಾಗಿದೆ. ಸಿನಿಮಾ ವಿಷ್ಯ ಮಾತ್ರವಲ್ಲದೇ ಕಲರ್‌ಫುಲ್ ಅವತಾರದಲ್ಲಿ ಬೋಲ್ಡ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು ಪಡ್ಡೆ ಹೈಕ್ಳ ಹಾರ್ಟ್ ಫೇವರೇಟ್ ಆಗಿದೆ. ನೆಚ್ಚಿನ ನಟಿ ರೀಷ್ಮಾಳ ಮುಂಬರುವ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.