ದುಬೈ: ಬಸ್ಸೊಂದು ರಸ್ತೆ ಬದಿಯ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ 8 ಭಾರತೀಯರು ಸೇರಿದಂತೆ 17 ಜನರು ಮೃತಪಟ್ಟ ಘಟನೆ ದುಬೈನಲ್ಲಿ ನಡೆದಿದೆ.
ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೆಶ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದೀನ್ ಅರಕ್ಕವೀತಿಲ್, ಕಿರಣ್ ಜಾನಿ, ವಾಸುದೇವ್ ಮತ್ತು ತಿಲಕ್ರಂ ಜವಾಹರ್ ಠಾಕೂರ್ ಮೃತ ಭಾರತೀಯರು ಎಂದು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Advertisement
1/2) We are sorry to inform that as per local authorities and relatives it is so far confirmed that 8 Indians have passed away in Dubai bus accident. Consulate is in touch with relatives of some of the deceased & awaits further details for others to inform their families.
— India in Dubai (@cgidubai) June 6, 2019
Advertisement
31 ಜನ ಪ್ರಯಾಣಿಕರಿದ್ದ ಬಸ್ ಒಮಾನ್ ನಿಂದ ದುಬೈಗೆ ಪ್ರಯಾಣ ಬೆಳೆಸಿತ್ತು. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ 17 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಸೇರಿದಂತೆ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದುಬೈ ಪೊಲೀಸರು, ಗಾಯಾಳುಗಳನ್ನು ದುಬೈ ನಗರದ ಸಶೀದ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
2/2) We will update the exact details as soon as they become available from local authorities. Our officers are in Rashid Hospital, Dubai to extend assistance. Any queries could be addressed to our officer Mr Sanjeev Kumar, Mob +971-504565441or on our helpline +971-565463903.
— India in Dubai (@cgidubai) June 6, 2019
ಅಪಘಾತಕ್ಕಿಡಾದ ಮ್ವಾಸಾಲಾತ್ ಕಂಪನಿಯ ಬಸ್ ಒಮಾನ್ ಸರ್ಕಾರದ ಒಡೆತನಕ್ಕೆ ಸೇರಿದ್ದಾಗಿದೆ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಮ್ವಾಸಾಲಾತ್ ಬಸ್ ಕಂಪನಿ ತಿಳಿಸಿದೆ.