ಟೋಕಿಯೊ: ಜಪಾನ್‌ನ (Japan) ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ (China) ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ಹಾಂಗ್ ಕಾಂಗ್‌ನ ನೋಂದಾಯಿತ ಸರಕು ಹಡಗಿನಿಂದ ರಕ್ಷಿಸಲ್ಪಟ್ಟ 13 ಜನರಲ್ಲಿ, ಆರು ಮಂದಿ ಚೀನಾದಿಂದ ಬಂದವರು. ಸಂಬಂಧಪಟ್ಟವರ ದೇಶಗಳನ್ನು ಸಂಪರ್ಕಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಇದನ್ನೂ ಓದಿ: ತಾಲಿಬಾನ್‌ನ್ನು 21ನೇ ಶತಮಾನಕ್ಕೆ ತರಲು ಸಹಾಯ ಮಾಡಿ – ಮುಸ್ಲಿಂ ಮಹಿಳೆ ಸಲಹೆ
Advertisement
Advertisement
ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್‌ನ ಡಾಂಜೋ ದ್ವೀಪಗಳ ಪಶ್ಚಿಮಕ್ಕಿರುವ ಸುಮಾರು 110 ಕಿಲೋಮೀಟರ್ ದೂರದ ಭಾಗದಿಂದ ರಾತ್ರಿ 11:15 ರ ಸುಮಾರಿಗೆ ಹಡಗು ದುರಂತದ ಕರೆ ಬಂದಿತ್ತು. ಚಂಡಮಾರುತದ ಎಚ್ಚರಿಕೆ ನೀಡಿಲಾಗಿತ್ತು. ಆ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.
Advertisement
ಸರಕು ಹಡಗಿನಲ್ಲಿ 14 ಮಂದಿ ಚೀನೀಯರು ಮತ್ತು 8 ಮಂದಿ ಮ್ಯಾನ್ಮಾರ್ ಸಿಬ್ಬಂದಿ ಇದ್ದರು. ಮರದ ತುಂಡುಗಳನ್ನು ಹಾಕಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಚಿಯಾನ್‌ಗೆ ಹಡಗು ತೆರಳುತ್ತಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ – ಶೂಟೌಟ್‌ಗೆ 3 ಬಲಿ
Advertisement
ಎಎಸ್‌ಡಿಎಫ್‌ನಿಂದ ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿಯಿಂದ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k