LatestCrimeInternationalLeading NewsMain Post

ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ – ಶೂಟೌಟ್‌ಗೆ 3 ಬಲಿ

ವಾಷಿಂಗ್ಟನ್‌: ಅಮೆರಿಕದಲ್ಲಿ (America) ಗುಂಡಿನ ದಾಳಿ ಮತ್ತೆ ಮುಂದುವರಿದಿದೆ. ಅಮೆರಿಕದ ವಾಷಿಂಗ್ಟನ್ (Washington) ರಾಜ್ಯದ ಯಾಕಿಮಾ ನಗರದ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ನಡೆದ ಗುಂಡಿನ (Shooting) ದಾಳಿಯಲ್ಲಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಬಂದೂಕುಧಾರಿ ಅಂಗಡಿಯೊಂದರಲ್ಲಿ 21 ಜನರ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಶೂಟರ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು

ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ - ಶೂಟೌಟ್‌ಗೆ 3 ಬಲಿ

ಯಕಿಮಾ, ವಾಷಿಂಗ್ಟನ್ ಸುಮಾರು 96,000 ಜನರಿರುವ ನಗರಗಳು. 2023 ರ ಆರಂಭದ ವಾರಗಳಲ್ಲೇ ಬಂಧೂಕು ಹಿಂಸಾಚಾರ ನಡೆಯುತ್ತಿದೆ. ಒಂದರ ಹಿಂದೆ ಒಂದರಂತೆ ಶೂಟೌಟ್‌ ಪ್ರಕರಣಗಳು ವರದಿಯಾಗುತ್ತಿವೆ.

ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಪ್ರದೇಶದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಈ ದುರಂತ ಘಟನೆ ನಡೆದಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

ಕೆಲ ದಿನಗಳ ಹಿಂದಷ್ಟೇ ಕ್ಯಾಲಿಫೋರ್ನಿಯಾದಲ್ಲಿ ಚೀನೀಯರು ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಅದರಲ್ಲಿ 10 ಮಂದಿ ಮೃತಪಟ್ಟಿದ್ದರು. ಅದಾದ ಬಳಿಕ ಕ್ಯಾಲಿಫೋರ್ನಿಯಾದಲ್ಲೇ ನಡೆದ 2 ಪ್ರತ್ಯೇಕ ದಾಳಿಗಳಲ್ಲಿ 7 ಜನರು ಸಾವಿಗೀಡಾಗಿದ್ದರು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button