ಮಂಗಳೂರು: ಕರಾವಳಿಯಾದ್ಯಂತ ಶುಕ್ರವಾರ (ಮಾ.20) ಈದುಲ್ ಫಿತ್ರ್ ಹಬ್ಬ ಆಚರಿಸುವಂತೆ ದಕ್ಷಿಣ ಕನ್ನಡ (Dakshina Kannada) ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅವರು ಕರೆ ನೀಡಿದ್ದಾರೆ.
ಇಂದು (ಮಾ.19) ಶವ್ವಾಲ್‌ನ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆ ನಾಳೆ ಈದ್ ಹಬ್ಬ ಆಚರಣೆಗೆ ದ.ಕ. ಜಿಲ್ಲಾ ಖಾಝಿ ಘೋಷಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಸ್ಲಿಮರು ಉಪವಾಸ ವೃತ ಆಚರಿಸಿದ್ದರು. ಇಂದು ಚಂದ್ರದರ್ಶನವಾದ ಹಿನ್ನೆಲೆ ಇಂದಿಗೆ ಉಪವಾಸ ವೃತ ಕೊನೆಗೊಳಿಸಿ, ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಈದ್ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ಅಧ್ಯಾಯ 2 ಇಲ್ಲಿಂದ ಶುರು – ಯುಗಾದಿಯಂದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಷಬ್
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಹಬ್ಬದ ಸಂಭ್ರಮ ಕಳೆಗಟ್ಟಿದೆ.

