ಭಾನುವಾರ ಈದ್ ಮಿಲಾದ್ ಹಬ್ಬ. ಹಾಗಾಗಿ ಸಿಹಿ ತಿನಿಸು ತಯಾರಿಸಲು ಸಿದ್ಧತೆ ನಡೆಸಿಕೊಂಡಿರುತ್ತಾರೆ. ಹಬ್ಬದ ದಿನ ವಿಶೇಷವಾದ ಸಿಹಿ ಅಡುಗೆ ಇರಬೇಕು ಎಂಬುದು ಎಲ್ಲರ ಇಷ್ಟ. ಹಾಗಾಗಿ ಸ್ಪೆಷಲ್ ಮತ್ತು ಸರಳವಾಗಿ ಮಾಡುವ ಈದ್ ಖೀರ್ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
* ಹಾಲು- 1.5 ಲೀಟರ್
* ಸಕ್ಕರೆ – 2 ಬಟ್ಟಲು
* ಶಾವಿಗೆ – 1 ಬಟ್ಟಲು
* ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿ – 1 ಬಟ್ಟಲು
* ಫ್ರೆಶ್ ಕ್ರೀಂ
* ಪ್ಲೇನ್ ಕೋವಾ – 2 ಸ್ಪೂನ್
* ತುಪ್ಪ – 5-6 ಸ್ಪೂನ್
* ಏಲಕ್ಕಿ ಪುಡಿ – ಅರ್ಧ ಸ್ಪೂನ್
* ಕೇಸರಿ – ಚಿಟಿಕೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಒಂದು ದೊಡ್ಡದಾದ ಪ್ಯಾನ್‍ಗೆ ಹಾಲು ಹಾಕಿ ಚೆನ್ನಾಗಿ ಕುದಿಸಿ. 15 ರಿಂದ 20 ನಿಮಿಷ ಹಾಲು ಕುದಿದ ನಂತರ ಹಾಲು ಗಟ್ಟಿ ಆಗುತ್ತಾ ಬರುತ್ತದೆ. ಆಗ ಹಾಲಿಗೆ ಕೇಸರಿ ದಳಗಳನ್ನು ಸೇರಿಸಿ.
* ಹಾಲು ಕುದಿಯುವಷ್ಟರಲ್ಲಿ ಒಂದು ಪ್ಯಾನ್‍ಗೆ ತುಪ್ಪ ಹಾಕಿ, ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. (ಒಂದೊಂದೇ ಹಾಕಿ ಫ್ರೈ ಮಾಡಬಹುದು ಅಥವಾ ಒಟ್ಟಿಗೆ ಹಾಕಿನೂ ಫ್ರೈ ಮಾಡಬಹುದು)
* ಅದೇ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಶಾವಿಗೆ ಹಾಕಿ ಗೋಲ್ಡನ್ ಬ್ರೌನ್ ಬರೋತನಕ ಫ್ರೈ ಮಾಡಿ.
* ಈಗ ಕುದಿಯುತ್ತಿರುವ ಹಾಲಿಗೆ ಸಕ್ಕರೆ ಸೇರಿಸಿ ಕೈಯಾಡಿಸಿ. 2 ನಿಮಿಷ ಆದ್ಮೇಲೆ ಕೋವಾ ಸೇರಿಸಿ ಕುದಿಸಿ.
* ಬಳಿಕ ಶಾವಿಗೆ ಸೇರಿಸಿ ಕುದಿಸಿ.
* ಈಗ ಏಲಕ್ಕಿ ಪುಡಿ, ಫ್ರೈ ಮಾಡಿದ ಡ್ರೈಫ್ರೂಟ್ಸ್ ಸೇರಿಸಿ.
* ಕೆಳಗೆ ಇಳಿಸುವಾಗ ಫ್ರೆಶ್ ಕ್ರೀಂ ಸೇರಿಸಿ. ಸ್ಟೌ ಆರಿಸಿ ಲಿಡ್ ಮುಚ್ಚಿಡಿ.
* ಈ ಕೀರ್ ತುಂಬಾ ಗಟ್ಟಿಗೂ ಇರಬಾರದು, ತುಂಬಾ ತೆಳ್ಳಗೂ ಇರಬಾರದು. ಸರ್ವ್ ಮಾಡುವಾಗ ಮೇಲೆ ಡ್ರೈ ಫ್ರೂಟ್ಸ್ ಚೂರುಗಳನ್ನು ಉದುರಿಸಿ ಕೊಡಿ.
Advertisement
ಇದನ್ನೂ ಓದಿ: ಈದ್ ಮಿಲಾದ್ ಆಚರಣೆಯ ವಿಶೇಷತೆ ಇಲ್ಲಿದೆ