ಬೆಂಗಳೂರು: ಮೊಟ್ಟೆ (Egg) ಬೆಲೆ ಏರಿಕೆಯತ್ತ (Price Hike) ಮುಖಮಾಡಿದ್ದು, ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದೆ.
Advertisement
ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ (Chicken) ನೀಡುವ ಆಹಾರದ (Food) ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್ಗೆ ಹೋಲ್ ಸೇಲ್ ರೂಪದಲ್ಲಿ ಬರೋಬ್ಬರಿ 575 ರೂಪಾಯಿ ಆಗಿದೆ. ಬಿಡಿಯಾಗಿ ಒಂದು ಮೊಟ್ಟೆಗೆ 6 ರೂಪಾಯಿ ಆಗುತ್ತೆ. ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: OTP ಕೊಟ್ರೆ ರೇಷ್ಮೆ ಸೀರೆ ಗಿಫ್ಟ್ – ಮಹಿಳಾ ಮತದಾರರ ಓಲೈಕೆಗೆ ಹೊಸ ತಂತ್ರ
Advertisement
Advertisement
ಬೆಲೆ ಏರಿಕೆ ಆಗಿರುವುದರಿಂದ ಅತ್ತ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಈ ಮೊಟ್ಟೆ ಬೆಲೆ ಏರಿಕೆಗೆ ಕಾರಣಗಳೇನಂದ್ರೆ ಕೋಳಿಗಳಿಗೆ ನೀಡೋ ಆಹಾರ ದುಬಾರಿಯಾಗಿದೆ. ಜೊತೆಗೆ ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿರೋದೇ ಪ್ರಮುಖ ಕಾರಣವಾಗಿದೆ. ಆದ್ರೂ ಮೊಟ್ಟೆ ಆರೋಗ್ಯಕರ ಆಹಾರ ಆಗಿರೋದ್ರಿಂದ ತಿನ್ನುತ್ತೇವೆ ಅಂತಾರೆ ಗ್ರಾಹಕರು. ಇದನ್ನೂ ಓದಿ: ಕಾರು ಗ್ಯಾರೇಜ್ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k