ಬೆಂಗಳೂರು: ಪ್ಲಾಸ್ಟಿಕ್ ಮೊಟ್ಟೆ ಹಂಚುತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮೊಟ್ಟೆ ಸಾಗಾಣೆ ಮಾಡುತ್ತಿದ್ದ ಟೆಂಪೋವನ್ನು ತಡೆದು ಧ್ವಂಸ ಮಾಡಿರುವ ಘಟನೆ ನೈಸ್ ರಸ್ತೆಯ ಗೊಲ್ಲರಹಳ್ಳಿಯಲ್ಲಿ ನಡೆದಿದೆ.
ಮುನಿದೋರೆ ಎಂಬಾತ ನೈಸ್ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಎರಡು ರೂಪಾಯಿಗೆ ಮೊಟ್ಟೆ ಮಾರಾಟ ಮಾಡ್ತಿದ್ದ. ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ಐದು ರೂಪಾಯಿ ಬೆಲೆ ಇದೆ. ಆದ್ರೆ ಈತ ಎರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಪ್ಲಾಸ್ಟಿಕ್ ಮೊಟ್ಟಯೆಂದು ಒಡೆದು ಸ್ಥಳದಲ್ಲೇ ಆಮ್ಲೆಟ್ ಮಾಡಿ ಪರೀಕ್ಷೆ ಮಾಡಿದ್ರು.
Advertisement
Advertisement
ಇಷ್ಟೇ ಅಲ್ಲದೇ ಇಡೀ ಟೆಂಪೋದಲ್ಲಿದ್ದ ಮೊಟ್ಟೆಗಳನ್ನು ರಸ್ತೆಗೆ ಎಸೆದು ನಾಶ ಮಾಡಿದ್ರು. ನೂರಾರು ಜನ ಸೇರಿದ್ದ ಕಾರಣ ಪೊಲೀಸರು ಅಲ್ಲಿದ್ದ ಜನರನ್ನು ಚದುರುಸಿ ವಾಪಾಸ್ ಕಳುಹಿಸಿದ್ರು.