ನ್ಯೂ ಇಯರ್‌ಗೆ ಈಗಾಗಲೇ ಸಲಕ ಸಿದ್ಧತೆ ನಡೆಯುತ್ತಿದೆ. ಇನ್ನೂ ಒಂದು ದಿನದಲ್ಲಿ ಹೊಸ ವರ್ಷ ಶುರುವಾಗುತ್ತೆ. ನ್ಯೂ ಇಯರ್ ದಿನ ಎಲ್ಲರೂ ಕೇಕ್ ಕಟ್ ಮಾಡಿ ವರ್ಷ ಪೂರ್ತಿ ತಮ್ಮ ಜೀವನ ಸಿಹಿಯಾಗಿರಲಿ ಎಂದು ಸಂಭ್ರಮಿಸುತ್ತಾರೆ. ಕೆಲವರು ಬೇಕರಿಯಿಂದ ಕೇಕ್ ತಂದು ನ್ಯೂ ಇಯರ್ ಸೆಲೆಬ್ರೇಷನ್ ಮಾಡುತ್ತಾರೆ. ಹೊಸ ವರ್ಷ ಎಂದರೆ ಹೊಸದಾಗಿಯೇ ವರ್ಷವನ್ನು ಆರಂಭಿಸಬೇಕು. ಹೀಗಾಗಿ ನೀವೇ ಮನೆಯಲ್ಲಿ ಸಿಂಪಲ್ ಆಗಿ ಕೇಕ್ ಮಾಡಿ, ನ್ಯೂ ಇಯರ್ ಆಚರಣೆ ಮಾಡಿ. ಆದ್ದರಿಂದ ನಿಮಗೆ ಎಗ್‍ಲೆಸ್ ಕೇಕ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
1. ಮೈದಾ – 1 ಬಟ್ಟಲು
2. ಸಕ್ಕರೆ ಪುಡಿ – 1 ಬಟ್ಟಲು
3. ಎಣ್ಣೆ – 4-5 ಚಮಚ
4. ಅಡುಗೆ ಸೋಡಾ – ಚಿಟಿಕೆ
5. ಹಾಲು – ಕಾಲು ಕಪ್
6. ವೆನಿಲ್ಲಾ ಎಸೆನ್ಸ್ – 1 ಚಮಚ
7. ಉಪ್ಪು – ಚಿಟಿಕೆ
8. ತುಪ್ಪ – 1 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಕೇಕ್ ಪ್ಯಾನ್‍ಗೆ ತುಪ್ಪ ಸವರಿ ಕೇಕ್ ಪೇಪರ್ ಹಾಕಿ ಇಡಿ.
* ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಸಕ್ಕರೆ ಪುಡಿ, ಎಣ್ಣೆ ಸೇರಿಸಿ ಚೆನ್ನಾಗಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ.
* ಅದೇ ಮಿಶ್ರಣಕ್ಕೆ ಮೈದಾ ಹಿಟ್ಟು, ಚಿಟಿಕೆ ಉಪ್ಪು, ಅಡುಗೆ ಸೋಡಾ ಸೇರಿಸಿ ಕಲಸಿ.
* ಈಗ ಹಾಲು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ.
* ಬಳಿಕ ವೆನಿಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಕಲಸಿ. ಗಂಟುಗಳು ಇಲ್ಲದಂತೆ ನಯವಾದ ಮಿಶ್ರಣ ರೆಡಿ ಮಾಡಬೇಕು.
(ಬೇಕಿದ್ದರೆ ಬೇರೆ ಫ್ಲೇವರ್‍ನ ಎಸೆನ್ಸ್ ಅನ್ನು ಬಳಸಿಕೊಳ್ಳಬಹುದು)
* ಈಗ ಮಿಶ್ರಣವನ್ನು ತುಪ್ಪ ಸವರಿ ಕೇಕ್ ಪೇಪರ್ ಹಾಕಿಟ್ಟಿದ್ದ ಕೇಕ್ ಪ್ಯಾನ್‍ಗೆ ಹಾಕಿ. ಬಬಲ್ಸ್ ಬರದಂತೆ ನೋಡಿಕೊಳ್ಳಿ.
* ಒಂದು ಕುಕ್ಕರ್‌ಗೆ ಅರ್ಧ ಇಂಚಿನಷ್ಟು ಮರಳು ಹಾಕಿ 5 ನಿಮಿಷ ಕಾದ ಮೇಲೆ ಪ್ಯಾನ್ ಸ್ಟಾಂಡ್ ಇಟ್ಟು ಮಿಶ್ರಣ ಹಾಕಿದ ಪ್ಯಾನ್ ಅನ್ನು ಇಡಿ.
* ಕುಕ್ಕರ್‌ಗೆ ವಿಶಲ್ ಹಾಕದೇ 10-15 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ..
* ಎಗ್‍ಲೆಸ್ ವೆನಿಲಾ ಕೇಕ್ ಸವಿಯಲು ರೆಡಿ.