ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಚಿಕನ್ ಬಿರಿಯಾನಿ, ಕಬಾಬ್, ಮಟನ್ ಯಾವುದೇ ಇರಲಿ ಜೊತೆಗೆ ಗರಂಗರಂ ಆದ ಎಗ್ ಕರ್ರಿ ಮಾಡಿ. ದಿಢೀರನೇ ಎಗ್ ಮಲೈ ಕರ್ರಿ ಮಾಡುವ ವಿಧಾನ ಇಲ್ಲಿದೆ…..
ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ – 4
2. ಹಾಲು – ಒಂದೂವರೆ ಕಪ್
3. ತುಪ್ಪ – 1 ಟೀ ಸ್ಪೂನ್
4. ಈರುಳ್ಳಿ – 2
5. ಹಸಿ ಮೆಣಸಿನಕಾಯಿ- 2 ರಿಂದ 3
6. ಬೆಳ್ಳುಳ್ಳಿ – 4 ರಿಂದ 5
Advertisement
7. ಹಸಿ ಶುಂಠಿ – 1 ಇಂಚು
8. ಜೀರಿಗೆ ಪೌಡರ್ – 1 ಟೀ ಸ್ಪೂನ್
9. ದನಿಯಾ ಪೌಡರ್ – 1/2 ಟೀ ಸ್ಪೂನ್
10. ಪೆಪ್ಪರ್ – 1/2 ಟೀ ಸ್ಪೂನ್
11. ಗರಂ ಮಸಾಲ – 1/2 ಟೀ ಸ್ಪೂನ್
12. ಅರಿಶಿಣ – ಚಿಟಿಕೆ
13. ಉಪ್ಪು – ರುಚಿಗೆ ತಕ್ಕಷ್ಟು
14. ಕೋತ್ತಂಬರಿ ಸೊಪ್ಪು
15. ಎಣ್ಣೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಕುದಿಸಿ, ಎರಡು ಭಾಗಗಳಾಗಿ ಪೀಸ್ ಮಾಡಿಟ್ಟುಕೊಳ್ಳಿ.
* ಮಿಕ್ಸಿ ಜಾರಿಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ.
* ಒಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ.
* ಫ್ರೈ ಮಾಡಿದ ಮಿಶ್ರಣಕ್ಕೆ ಜೀರಿಗೆ ಪೌಡರ್, ದನಿಯಾ ಪಡಿ, ಪೆಪ್ಪರ್, ಗರಂ ಮಸಾಲ ಮತ್ತು ಎರಡರಿಂದ ಮೂರು ಟೀ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
Advertisement
* ಮಸಾಲಾ ಫ್ರೈ ಆಗ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿದ ನಂತರ ಒಂದೂವರೆ ಕಪ್ ಹಾಲು ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಎರಡು ನಿಮಿಷದ ಬಳಿಕ ಮೊಟ್ಟೆಯ ಪೀಸ್‍ಗಳನ್ನು ಒಂದೊಂದಾಗಿ ಸೇರಿಸಿ ಮತ್ತೆ ಕುದಿಸಿ. ಎರಡು ನಿಮಿಷದ ಬಳಿಕ ಮೊಟ್ಟೆಯನ್ನು ಉಲ್ಟ್ ಮಾಡಿಕೊಂಡು ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಕೊನೆಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿದ್ರೆ ಘಮ ಘಮಿಸುವ ಎಗ್ ಮಲೈ ಕರ್ರಿ ರೆಡಿ.