Tungabhadra Dam |ಈವರೆಗೂ ಸಾಧ್ಯವಾಗಿಲ್ಲ ತಾತ್ಕಾಲಿಕ ಗೇಟ್- ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ

Public TV
1 Min Read
Tungabhadra Dam TB Dam 2

ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋಗಿ ಇಂದಿಗೆ ಆರು ದಿನ ಕಳೆದಿದ್ದು ಈವರೆಗೂ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸಾಧ್ಯವಾಗಿಲ್ಲ.

ಈವರೆಗೂ 40 ಟಿಎಂಸಿ ನೀರು ಖಾಲಿ ಆಗಿದೆ. ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸುತ್ತಿರುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ. ಇದು ತುಂಗಭದ್ರೆಯನ್ನೇ ನಂಬಿಕೊಂಡಿರೋ ರೈತರ (Farmers) ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಾಳೆ ರಾಜ್ಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಬಂದ್ – ದಿನೇಶ್ ಗುಂಡೂರಾವ್ ಪರೋಕ್ಷ ಬೆಂಬಲ

Tungabhadra Dam TB Dam 3

 

ಗುರುವಾರ ಜಿಂದಾಲ್ ಕಂಪನಿ (Jindal Company) ನಿರ್ಮಿಸಿದ್ದ ಗೇಟ್ ಅಳವಡಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಂದು ಹೊಸ ಗೇಟ್ ಕೂರಿಸುವ ಪ್ರಯತ್ನ ನಡೆಯಿತು. ಕ್ರೇನ್ ಚಲನೆಗೆ 19ನೇ ಗೇಟ್ ಮೇಲ್ಭಾಗದಲ್ಲಿದ್ದ ಸ್ಕೈವಾಕ್‌ ಅಡ್ಡಿಯಾಗಿದ್ದು, ಅದನ್ನು ತೆರವು ಮಾಡಲಾಗಿದೆ. ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಭೂಪರಿವರ್ತನೆಗೆ ತಾತ್ಕಾಲಿಕ ತಡೆ: ಈಶ್ವರ ಖಂಡ್ರೆ


ಈ ಮಧ್ಯೆ ಕಾರ್ಯಾಚರಣೆ ನೇತೃತ್ವ ವಹಿಸಿರುವ ಕನ್ನಯ್ಯ ನಾಯ್ಡು, ರಾಜ್ಯದ ಮಾಧ್ಯಮಗಳನ್ನು (Media) ದೂರ ಇಟ್ಟಿದ್ದಾರೆ. ಖುದ್ದು ಜಿಲ್ಲಾಡಳಿತ ಫೋಟೋ ವೀಡಿಯೋಗೆ ನಿರ್ಬಂಧ ಹೇರಿದೆ. ಡ್ಯಾಂ ಅವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಕವರೇಜ್ ಮಾಡಲು ತೆಲುಗು ಮೀಡಿಯಾಗಳಿಗೆ ಅವಕಾಶ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ 65 ಟಿಎಂಸಿಗೆ ಇಳಿದಿದೆ. ಹೊರಹರಿವಿನ ಪ್ರಮಾಣವನ್ನು 86 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಒಳಹರಿವು 33 ಸಾವಿರ ಕ್ಯೂಸೆಕ್ ಇದೆ.

Share This Article