ಚಿಕ್ಕಬಳ್ಳಾಪುರ: EFD ಸಂಸ್ಥೆಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರದಲ್ಲಿ ಪಬ್ಲಿಕ್ ಟಿವಿ ಜ್ಞಾನದೀವಿಗೆ ಟ್ಯಾಬ್ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಗುಟ್ಟಾಗಿ ಎರಡನೇ ಪುತ್ರನಿಗೆ ನಾಮಕರಣ ಮಾಡಿದ್ರಾ ಸ್ಟಾರ್ ದಂಪತಿ?
ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯ ಮುಂದುವರೆದಿದ್ದು. ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಹಾಗೂ ನಾರಾಯಣಪುರ ಸೇರಿದಂತೆ ಬೆಂಗಳೂರು ಪೂರ್ವ ತಾಲ್ಲೂಕು ಜ್ಯೋತಿಪುರ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.
ಟ್ಯಾಬ್‍ಗಳಿಗೆ ಬೇಕಾಗುವ ಹಣವನ್ನು ಭಟ್ಟರಮಾರೇನಹಳ್ಳಿ ಬಳಿಯ (EFD) ಇಂಡಕ್ಷನ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್‍ಆರ್ ಅನುದಾನದಡಿಯಲ್ಲಿ ನೀಡಿ ಸಹಾಯಹಸ್ತ ಚಾಚಿದೆ. ಜ್ಯೋತಿಪುರ ಶಾಲೆಯಲ್ಲಿ 45 ಟ್ಯಾಬ್‍ಗಳು, ವಿಶ್ವನಾಥಪುರ ಶಾಲೆಯಲ್ಲಿ 37 ಟ್ಯಾಬ್‍ಗಳು ಹಾಗೂ ನಾರಾಯಣಪುರ ಶಾಲೆಯಲ್ಲಿ 14 ಟ್ಯಾಬ್‍ಗಳು ಸೇರಿದಂತೆ ಮೂರು ಶಾಲೆಯ 192 ಮಂದಿ ವಿದ್ಯಾರ್ಥಿಗಳಿಗೆ 96 ಟ್ಯಾಬ್‍ಗಳನ್ನ ವಿತರಣೆ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಸಂಸ್ಥೆಯ ನೌಕರರಾದ ಚಂದ್ರಶೇಖರ್, ಗಣೇಶ್, ಚತುಶ್ ವಿತರಿಸಿದರು. ಪಬ್ಲಿಕ್ ಟಿವಿ ಹಾಗೂ EFD ಸಂಸ್ಥೆಯ ಕಾರ್ಯಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಧನ್ಯವಾದಗಳನ್ನ ಅರ್ಪಿಸಿದರು.