ಶ್ರೀನಗರ: ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಜಮ್ಮು ಕಾಶ್ಮೀರದ (Jammu Kashmir) ಹಲವು ಭಾಗಗಳಲ್ಲಿ ಎರಡು ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗುವುದು (School Close) ಎಂದು ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೇ 9 ಹಾಗೂ 10ರಂದು ಬಾರಾಮುಲ್ಲಾ, ಕುಪ್ವಾರಾ, ಉಪ-ವಿಭಾಗ (ಗುರೆಜ್) ಮತ್ತು ಶ್ರೀನಗರ ಮತ್ತು ಅವಂತಿಪೋರಾ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಎರಡು ದಿನಗಳವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು (ಖಾಸಗಿ ಮತ್ತು ಸರ್ಕಾರಿ) ಮೇ 9 ರಂದು ಮುಚ್ಚಲ್ಪಡುತ್ತವೆ ಎಂದು ಜಮ್ಮುವಿನ ವಿಭಾಗೀಯ ಆಯುಕ್ತರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನ ಧ್ವಜ ಹಾರಾಟ