ಚಾಮರಾಜನಗರ: ತಾನು ವಿದ್ಯಾಭ್ಯಾಸ ಮಾಡಿದ ಶಾಲೆಯನ್ನು ದತ್ತು ಪಡೆದು ಶಾಲೆಯನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲು ಶಿಕ್ಷಣ ಸಚಿವ ಎನ್.ಮಹೇಶ್ ಚಿಂತನೆ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಎಂಜಿಎಸ್‍ವಿ ಶಾಲೆಯೂ ಸದ್ಯ ಶಿಥಿಲಾವಸ್ಥೆಯಲ್ಲಿದೆ. ಈ ಶಾಲೆಯ ವೀಕ್ಷಣೆಗೆಂದು ಆಗಮಿಸಿದ್ದ ಸಚಿವ ಎನ್.ಮಹೇಶ್ ಇದು ನಾನು ಓದಿದ ಶಾಲೆ ಈಗ ಸ್ಥಿತಿಯಲ್ಲಿರುವುದು ನಿಜಕ್ಕೂ ಬೇಸರ ತಂದಿದೆ. ಹೀಗಾಗಿ ಶಾಲೆಯನ್ನು ದತ್ತು ಪಡೆದು ಹೈಟೆಕ್ ಆಗಿ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ನನು ನನ್ನ ಹೈಸ್ಕೂಲ್ ಓದನ್ನ ಇಲ್ಲೇ ಮುಗಿಸಿದ್ದೇನೆ. ಅಲ್ಲದೇ 2 ವರ್ಷ ಪಿಯುಸಿ ಕೂಡ ಇಲ್ಲೇ ಮಾಡಿದ್ದೇನೆ. ಮುಡುಗುಂಡದ ಗುರ್ಕಾರ್ ಸುಬ್ಬಪ್ಪ ವೀರಪ್ಪ ಹಾಗೂ ಕುಟುಂಬ ಕಟ್ಟಿದ ಅದ್ಭುತವಾದಂತಹ ಶಾಲೆಯಾಗಿದೆ. ದಾನಿಗಳು ಆ ಕಾಲದಲ್ಲೇ ಇಷ್ಟೊಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದಲ್ಲಿದ್ದುಕೊಂಡು ಇದನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲವೆಂದರೆ ನನ್ನಂತಹ ಹಳೇಯ ವಿದ್ಯಾರ್ಥಿಗಳಿಗೆ ಅವಮಾನ ಅಂತ ಅನಿಸಿದೆ. ಹೀಗಾಗಿ ಎಂಜಿಎಸ್‍ವಿ ಶಾಲೆ ಹಾಗೂ ಮೈದಾನ ಎಲ್ಲವನ್ನು ಹೈಟೆಕ್ ಮಾಡುವ ಜವಾಬ್ದಾರಿಯನ್ನು ಶಿಕ್ಷಣ ಸಚಿವನಾಗಿ ನಾನೇ ಹೊತ್ತುಕೊಂಡಿದ್ದೇನೆ ಅಂದ್ರು.
Advertisement
ಶಾಲೆಯಲ್ಲಿ ಏನೇನು ಕೆಲಸಗಳಾಗಬೇಕು ಎಂಬುದನ್ನು ಪಿಡಬ್ಯುಡಿ ಎಂಜಿನಿಯರ್ ಗೆ ಬಂದು ಪರಿಶೀಲನೆ ನಡೆಸಲು ಹೇಳಿದ್ದೇನೆ. ಇಲ್ಲಿರುವ ಕಲೆಗೆ ಯಾವುದೇ ಹಾನಿಯಾಗದಂತೆ ಕಟ್ಟಡವನ್ನು ಸುಭದ್ರಪಡಿಸಬೇಕು. ಈ ವರ್ಷದಲ್ಲಿ ಇದನ್ನು ಮುಗಿಸಬೆಕು ಅಂತ ಯೋಜನೆ ಹಾಕಿಕೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews