ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಇನ್ಮುಂದೆ ಬಿಎಲ್‌ಓಗಳಾಗಿ ನೇಮಿಸದಂತೆ ಚುನಾವಣೆ ಆಯೋಗಕ್ಕೆ ಶಿಕ್ಷಣ ಇಲಾಖೆ ಪತ್ರ ಬರೆದು ಮನವಿ ಮಾಡಿದೆ.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಚುನಾವಣೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಹಸು ಕೆಚ್ವಲು ಕೊಯ್ದ ಕೇಸ್ | ಕಾಂಗ್ರೆಸ್ ಅಧಿಕಾರ – ಮಾನಸಿಕ ಅಸ್ವಸ್ಥರಿಗೂ ಏನಾದ್ರೂ ಸಂಬಂಧ ಇದೆಯೇ?: ಸಿ.ಟಿ ರವಿ
ಈಗಷ್ಟೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಮಕ್ಕಳ ಶಿಕ್ಷಣ ದೃಷ್ಟಿಯಿಂದ ಶಿಕ್ಷಕರು ಭೋದನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಡ್ಬೇಕು. ಜೊತೆಗೆ ಉತ್ತಮ ಫಲಿತಾಂಶ ಬರಬೇಕಂದ್ರೆ ಶಿಕ್ಷಕರ ಪಾತ್ರ ತುಂಬಾ ಮುಖ್ಯ. ಆದ್ರೆ ಕೆಲ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಶಿಕ್ಷಕರು ನಿಯೋಜನೆ ಆಗಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆ ಆಗ್ತಿದೆ.
ಹೀಗಾಗಿ, ಮತದಾರರ ಪರಿಷ್ಕರಣೆಗೆ ನಿಯೋಜಿಸಿರುವ ಶಿಕ್ಷಕರನ್ನ ಹಿಂಪಡೆಯಬೇಕೆಂದು ತಮ್ಮ ಪತ್ರದಲ್ಲಿ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ.