ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ನಿನ್ನೆಯಷ್ಟೆ ಪಠ್ಯ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿ ಗೊಂದಲಗಳನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿವಾರಣೆ ಮಾಡಿದ್ದರು. ಇಂದು ಮತ್ತೆ ಕುವೆಂಪು ಬಗ್ಗೆ ಪಠ್ಯದಲ್ಲಿ ಕೆಲ ಅಂಶಗಳು ಬಿಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಕುವೆಂಪು ಪಠ್ಯದಲ್ಲಿ ಕೆಲ ಅಂಶಗಳು ಕೈ ಬಿಡಲಾಗಿದೆ ಎನ್ನುವ ಆರೋಪಕ್ಕೆ ಸ್ವತಃ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಕುವೆಂಪು ಅವರ ಯಾವುದೇ ಪಠ್ಯವನ್ನು ಕೈಬಿಟ್ಟಿಲ್ಲ. ಅವರ ಪಠ್ಯವನ್ನು ಪರಿಷ್ಕರಣೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಕುವೆಂಪು ಪಠ್ಯದ ಗೊಂದಲ ನಿವಾರಣೆ ಮಾಡಿದೆ.
Advertisement
Advertisement
ಸ್ಪಷ್ಟೀಕರಣದಲ್ಲಿ ಏನಿದೆ?: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಅವರು 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪಸ್ತಕವನ್ನು ಪರಿಷ್ಕರಿಸಿದ್ದು, ಕುವೆಂಪು ಅವರ ಬಗ್ಗೆ ಇದ್ದ ವಿಷಯಾಂಶವನ್ನು ಕೈಬಿಡಲಾಗಿದೆ. ಹಾಗೂ ಅವರಿಗೆ ಅಪಮಾನಗೊಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ಪಠ್ಯದಲ್ಲಿ ಕುವೆಂಪುಗೆ ಅವಮಾನ – ಯತೀಂದ್ರ ಸಿದ್ದರಾಮಯ್ಯ Vs ರೋಹಿತ್ ಚಕ್ರತೀರ್ಥ
Advertisement
Advertisement
ವಾಸ್ತವವಾಗಿ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕವನ್ನು ರೋಹಿತ್ ಚಕ್ರತೀರ್ಥ ಸಮಿತಿಯವರು ಪರಿಷ್ಕರಿಸಿರುವುದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು 2017-18ನೇ ಸಾಲಿನಲ್ಲಿ ಪರಿಷ್ಕರಿಸಿದ್ದ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕದ ಪ್ರತಿಯೊಬ್ಬರೂ ವಿಶಿಷ್ಟ ಎಂಬ ಪಾಠದಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಶೀರ್ಷಿಕೆ ಅಡಿಯಲ್ಲಿ ಇದ್ದ – 1 ಸಾಲುಗಳ ವಿಷಯಾಂಶವನ್ನು 2022-23ನೇ ಸಾಲಿನ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ