ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್ಯಪಾಲ (West Bengal Governor) ಸಿ.ವಿ ಆನಂದ್ ಬೋಸ್ (CV Ananda Bose) ಅವರು ಬಿಡುಗಡೆ ಮಾಡಿದ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ನನ್ನ ಬಳಿ ರಾಜ್ಯಪಾಲರ ನಾಚಿಕೆಗೇಡಿನ ನಡವಳಿಕೆಯನ್ನು ಸಾಬೀತುಪಡಿಸುವ ಆಘಾತಕಾರಿ ವೀಡಿಯೋ ಇದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಹೊಸ ಬಾಂಬ್ ಸಿಡಿಸಿದ್ದಾರೆ.
ಹೂಗ್ಲಿಯ ಸಪ್ತಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತಾಡಿದ್ದಾರೆ. ಈ ವೇಳೆ ರಾಜಭವನದ ಉದ್ಯೋಗಿಯೊಬ್ಬರಿಂದ ಕಿರುಕುಳದ ಆರೋಪ ಎದುರಿಸುತ್ತಿರುವ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ತಮ್ಮ ಹುದ್ದೆಗೆ ಏಕೆ ರಾಜೀನಾಮೆ ನೀಡುವುದಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ 50 ಸ್ಥಾನ ಕೂಡ ಗಳಿಸಲ್ಲ: ಮೋದಿ ಭವಿಷ್ಯ
ಆನಂದ್ ಬೋಸ್ ಅವರು ರಾಜ್ಯಪಾಲರಾಗಿ ಇರುವವರೆಗೆ ನಾನು ರಾಜಭವನಕ್ಕೆ ಕಾಲಿಡುವುದಿಲ್ಲ. ಅವರನ್ನು ರಸ್ತೆ ಬದಿಯಲ್ಲಿ ಭೇಟಿಯಾಗಲು ಬಯಸುತ್ತೇನೆ. ರಾಜಭವನದಲ್ಲಿ ಅವರ ಪಕ್ಕ ಕೂರಲು ಆಗುವುದಿಲ್ಲ. ಅವರ ಪಕ್ಕದಲ್ಲಿ ಪಾಪ ಇರುತ್ತದೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 24 ಮತ್ತು ಮೇ 2ರಂದು ರಾಜ್ಯಪಾಲರ ಮನೆಯಲ್ಲಿ ಆನಂದ್ ಬೋಸ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರಾಜಭವನದ ಗುತ್ತಿಗೆ ಮಹಿಳಾ ಉದ್ಯೋಗಿಯೊಬ್ಬರು ಕೋಲ್ಕತ್ತಾ ಪೊಲೀಸರಿಗೆ ಕಳೆದ ವಾರ ದೂರು ಸಲ್ಲಿಸಿದ್ದರು. ಈ ಸಂಬಂಧ ವೀಡಿಯೋ ಒಂದನ್ನು ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆ ಮಾಡಲಾದ ವೀಡಿಯೋವನ್ನು ಎಡಿಟ್ ಆಗಿರುವ ವೀಡಿಯೋ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿಯವರು, ನನಗೆ ಇನ್ನೊಂದು ವೀಡಿಯೋ ಸಿಕ್ಕಿದೆ. ಅದು ನಿಮ್ಮ ನಾಚಿಕೆಗೇಡಿನ ನಡವಳಿಕೆಯನ್ನು ತೋರಿಸುತ್ತದೆ. ಮಹಿಳೆಯರು ಕಿರುಕುಳಕ್ಕೊಳಗಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷಿಗಳಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಕೀಲ ದೇವರಾಜೇಗೌಡಗೆ ಮೇ 24 ರವರೆಗೆ ನ್ಯಾಯಾಂಗ ಬಂಧನ