ಯಾದಗಿರಿ: ಪ್ರಣವಾನಂದ ಶ್ರೀಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೆ ಶ್ರೀಗಳ ಕ್ಷಮೆ ಕೋರುವಂತೆ ಈಡಿಗ ಮಹಾಮಂಡಳಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಯಾದಗಿರಿ (Yadgir) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಡಿಗ ಮಹಾಮಂಡಳಿ ಪದಾಧಿಕಾರಿಗಳು, ಶ್ರೀಗಳ ಹಿನ್ನೆಲೆ ಏನು ಅನ್ನೋದನ್ನ ಮೊದಲು ಶಿಕ್ಷಣ ಸಚಿವರು ತಿಳಕೊಳ್ಳಲಿ. ಪ್ರಣವಾನಂದ ಶ್ರೀಗಳು (Pranavananda Swamiji) ನಮ್ಮ ಸಮುದಾಯದ ಏಳಿಗೆಗಾಗಿ ಸತತ 3 ವರ್ಷಗಳು 1,000 ಕೀ.ಮೀ. ಪಾದಯಾತ್ರೆ ಮಾಡಿದ್ದಾರೆ. ಶ್ರೀಗಳ ಪಾದಯಾತ್ರೆಯಿಂದ ಎಚ್ಚೆತ್ತ ಹಿಂದಿನ ಸರ್ಕಾರದಲ್ಲಿ ಹಿಂದುಳಿದ ಈಡಿಗ ಜನಾಂಗ ಬ್ರಹ್ಮ ಶ್ರೀ ನಾರಾಯಣ ಗುರು ನಿಗಮ ಮಂಡಳಿ ಘೋಷಣೆ ಮಾಡಿದೆ. ಇದೇ ತಿಂಗಳ ಸೆ.9 ರಂದು ಆಯೋಜನೆಗೊಂಡಿದ್ದ ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ 30 ರಿಂದ 40 ಸಾವಿರ ಜನಸಂಖ್ಯೆ ಸೇರಿತ್ತು. ಇದರಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗುತ್ತದೆ ಎಂದು ಮಧು ಬಂಗಾರಪ್ಪ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ನಮ್ಮ ಇಡೀ ಸಮುದಾಯ ಪ್ರಣವಾನಂದ ಶ್ರೀಗಳನ್ನ ಒಪ್ಪಿಕೊಂಡಿದೆ. ಆದ್ರೆ ಮಧು ಬಂಗಾರಪ್ಪ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದು ಗೊತ್ತಿಲ್ಲ. ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮಧು ಬಂಗಾರಪ್ಪ ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ
Advertisement
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಲೇ ಶ್ರೀಗಳ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಈಡಿಗ ಮಹಾಮಂಡಳಿಯು ರಾಜ್ಯಾದ್ಯಂತ ಶಿಕ್ಷಣ ಸಚಿವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?
ಶಿವಮೊಗ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ತನಗೆ ಜೀವ ಬೆದರಿಕೆ ಇದೆ ಎಂದು ಈಡಿಗ ಸಮುದಾಯದ ಪ್ರಣವನಂದ ಸ್ವಾಮೀಜಿ ಕಣ್ಣೀರು ಹಾಕಿ ಆರೋಪ ಮಾಡಿದ್ದಾರೆ. ಸ್ವಾಮೀಜಿ ಏಕೆ ಕಣ್ಣೀರು ಹಾಕಿದ್ದಾರೆ? ಅವರು ಏನಾದರೂ ತಪ್ಪು ಮಾಡಿದ್ದಾರಾ? ಕಳ್ಳತನ ಮಾಡಿದ್ದರೆ, ತಪ್ಪು ಮಾಡಿದ್ದರೆ ಕಣ್ಣೀರು ಹಾಕೋದು ಸಹಜ. ಇಂತಹವರನ್ನ ಬೇಕಾದಷ್ಟು ನೋಡಿದ್ದೇನೆ. ಹಿಂದಿನಿಂದ ಅವರು ಈ ರೀತಿ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ. ಅವರು ನಮ್ಮ ಸಮಾಜದ ಸ್ವಾಮೀಜಿಯೇ ಅಲ್ಲ. ಅವರೇನು ಈಡಿಗ ಸಮಾಜದವರಾ? ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಊಸರವಳ್ಳಿ ಸರ್ಕಾರ, ನೀರು ಬಿಡಲ್ಲ ಎಂದು ನೀರು ಬಿಡ್ತೀವಿ ಅಂತಿದ್ದಾರೆ: ಬೊಮ್ಮಾಯಿ ಕಿಡಿ
Web Stories