ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿಯ ಬಳಿಕ ಇದೀಗ ಅವರ ಮಾವ ತಿಮ್ಮಯ್ಯ ಅವರಿಗೂ ಇಡಿ ಸಮನ್ಸ್ ನೀಡಿದೆ.
ಮೈಸೂರಿನಲ್ಲಿರುವ ಡಿಕೆಶಿ ಮಾವ ತಿಮ್ಮಯ್ಯಗೆ ಮಾತ್ರವಲ್ಲದೇ ಸ್ನೇಹಿತ ಶಶಿಕುಮಾರ್, ಆಡಿಟರ್ ಚಂದ್ರಶೇಖರ್ ತಿಮ್ಮಯ್ಯ, ಸಿಂಗಾಪುರದ ಗೆಳೆಯ ರಜನೀಶ್ ಗೋಪಿನಾಥ್ ಹಾಗೂ ವ್ಯವಹಾರಿಕ ಸಂಬಂಧಿ ಅನಿಲ್ ಜೈನ್ ಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಪುತ್ರಿ ಐಶ್ವರ್ಯಾ ಹೆಸರಿನಲ್ಲಿದ್ದ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.
Advertisement
Advertisement
184 ಜನರ ಲಿಸ್ಟ್ ನಲ್ಲಿ ಇವರುಗಳ ಹೆಸರೂ ಇದೆ. ಐಟಿ ದಾಳಿ ನಡೆದ ಸಂದರ್ಭದಲ್ಲಿ ಸರಿಸುಮಾರು 64 ಕಡೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದರು. ಇದನ್ನೂ ಓದಿ: 78 ಕೋಟಿ ಹೂಡಿಕೆ – ಐಶ್ವರ್ಯ ಕಂಪನಿಯ ಆಸ್ತಿ ದಾಖಲೆ ಜಪ್ತಿ – ಏನಿದು ಗಿಫ್ಟ್ ಡೀಡ್?
Advertisement
ಐಟಿ ದಾಳಿ ಬಳಿಕ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇನ್ನು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಇಡಿ ಹೇಳಿತ್ತು.
Advertisement
ಇತ್ತ ಮಾವ ತಿಮ್ಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಸಿಗಬಹುದು ಅಥವಾ ವ್ಯವಹಾರಿಕ ಸಂಬಂಧಗಳ ಮಾಹಿತಿ ಕಲೆ ಹಾಕಬಹುದು ಎಂಬ ನಿಟ್ಟಿನಲ್ಲಿ ಇಡಿ ಸಮನ್ಸ್ ನೀಡಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ