– 2017ರ ಡ್ರಗ್ಸ್ ಕೇಸ್, ಸೆ.2 ರಿಂದ 22ರೊಳಗೆ ವಿಚಾರಣೆ
ನವದೆಹಲಿ: ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜ ಮತ್ತು ಚಾರ್ಮಿ ಕೌರ್ ಸೇರಿದಂತೆ 10 ಜನರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.
Advertisement
ಸೆಪ್ಟೆಂಬರ್ 6ಕ್ಕೆ ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8ಕ್ಕೆ ರಾಣಾ ದಗ್ಗುಬಾಟಿ ಮತ್ತು ಸೆಪ್ಟೆಂಬರ್ 9ರಂದು ರವಿತೇಜ ಹೈದರಬಾದ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಲಾವಿದ ಜೊತೆ ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ರವಿತೇಜ ಡ್ರೈವರ್ ಮತ್ತು ‘ಎಫ್’ ಕ್ಲಬ್ ನ ‘ಜಿಎಂ’ ಹೆಸರಿನ ವ್ಯಕ್ತಿಗೂ ನೋಟಿಸ್ ನೀಡಲಾಗಿದೆ. ಇವರೆಲ್ಲರ ವಿಚಾರಣೆ ಸೆಪ್ಟೆಂಬರ್ 2ರಿಂದ 22ರೊಳಗೆ ನಡೆಯಲಿದೆ.
Advertisement
Advertisement
12 ಲಕ್ಷ ಮೌಲ್ಯದ ಡ್ರಗ್ಸ್, 12 ಕೇಸ್:
2017ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ತೆಲಂಗಾಣದ ಅಬಕಾರಿ ಇಲಾಖೆ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡು ಒಟ್ಟು 12 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಇದೇ ಪ್ರಕರಣದಲ್ಲಿ ಟಾಲಿವುಡ್ ಕಲಾವಿದರ ಹೆಸರು ಕೇಳಿ ಬಂದರೂ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಎಸ್‍ಐಟಿ ಯಾರನ್ನೂ ಆರೋಪಿಗಳೆಂದು ಪರಿಗಣಿಸಿರಲಿಲ್ಲ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಸುಶಾಂತ್ ಕೇಸ್ – ಎನ್‍ಸಿಬಿಯಿಂದ 30 ಸಾವಿರ ಪುಟಗಳ ಚಾರ್ಚ್‍ಶೀಟ್ ಸಲ್ಲಿಕೆ
Advertisement
62 ಜನರ ಕೂದಲು, ಉಗುರು ಮಾದರಿ ಸಂಗ್ರಹ:
2017 ಜುಲೈನಲ್ಲಿ ಎಸ್‍ಐಟಿ ಟಾಲಿವುಡ್ ಕಲಾವಿದರು ಸೇರಿದಂತೆ 62 ಜನರ ಕೂದಲು ಮತ್ತು ಉಗುರು ಮಾದರಿಯನ್ನು ಸಂಗ್ರಹಿಸಿತ್ತು. ಆದ್ರೆ ಈ ವರದಿಯಲ್ಲಿ ಎಸ್‍ಐಟಿಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಇದೇ ಪ್ರಕರಣದಲ್ಲಿ ಸೌಥ್ ಆಫ್ರಿಕಾ ಮೂಲದ ರಾಫೇಲ್ ಎಲೆಕ್ಸ್ ವಿಕ್ಟರ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದನು. ಆರೋಪಿ ವಿರುದ್ಧ ಎಸ್‍ಐಟಿ ಚಾರ್ಜ್ ಶೀಟ್ ಸಹ ಸಲ್ಲಿಸಿದೆ. ಇದನ್ನೂ ಓದಿ: ಅರ್ಜುನ್ ರಾಂಪಾಲ್‍ಗೆ ಮತ್ತೆ ಡ್ರಗ್ಸ್ ಕಂಟಕ – ಎನ್‍ಸಿಬಿಯಿಂದ ನೋಟಿಸ್
2019ರ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಟೀಂ ವಿಚಾರಣೆ ನಡೆಸಿ, ಕೆಲ ಮಾಹಿತಿ ಪಡೆದುಕೊಂಡಿತ್ತು. ಆದ್ರೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರಲಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಸಹ ವಿಚಾರಣೆ ಎದುರಿಸಿದ್ದರು. ಇದನ್ನೂ ಓದಿ: ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು