ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಪತಿ ರಾಜ್ ಕುಂದ್ರಾಗೆ (Raj Kundra) ಸೇರಿದ ಅಂದಾಜು 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ (ED) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಆಸ್ತಿಯಲ್ಲಿ ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿದೆ.
2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ (PMLA) ಇಡಿ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿಯಾದ ಆಸ್ತಿಗಳಳ್ಲಿ ಪುಣೆಯಲ್ಲಿರುವ ಬಂಗ್ಲೆ, ಫ್ಲಾಟ್ ಹಾಗೂ ಇಕ್ವಿಟಿ ಷೇರು ಕೂಡ ಹೊಂದಿವೆ. ಇದನ್ನೂ ಓದಿ: Exclusive: ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದು: ಕುಮಾರಸ್ವಾಮಿ
Advertisement
Advertisement
ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಸ್ಥೆಯ ಮೂಲಕ ಅಮಿತ್ ಭಾರದ್ವಾಜ್, ವಿವೇಕ್, ಅಜಯ್, ಮಹೇಂದರ್ ಹೀಗೆ ಹಲವಾರು ಏಜೆಂಟರ್ ಗಳು ಬಿಟ್ ಕಾಯಿನ್ (Bit Coin) ರೂಪದಲ್ಲಿ 2017ರಲ್ಲಿ 6,600 ಕೋಟಿ ರೂ. ಹಣ ಸಂಗ್ರಹಿಸಿದ್ದರು. ಇವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ಮಾಡಿದ್ದರು ಎನ್ನುವ ಆರೋಪವಿದೆ. ಇದನ್ನೂ ಓದಿ: ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ
Advertisement
ಉಕ್ರೇನ್‌ನಲ್ಲಿ ಬಿಟ್ ಕಾಯಿನ್ ಮೈನಿಂಗ್ ಫಾರ್ಮ್ ಶುರು ಮಾಡುವುದಕ್ಕೆ ಶಿಲ್ಪಾ ಮತ್ತು ರಾಜ್ ಕುಂದ್ರಾ ದಂಪತಿ ಅಮಿತ್ ಭಾರದ್ವಾಜ್ ಬಳಿ 285 ಬಿಟ್ ಕಾಯಿನ್ ಪಡೆದಿದ್ದಾರೆ. ಸದ್ಯ ಈ ಬಿಟ್ ಕಾಯಿನ್ ಮೌಲ್ಯ ಸುಮಾರು 150 ಕೋಟಿ ರೂ. ಎಂದು ಎಂದು ತನಿಖಾ ಸಂಸ್ಥೆ ಹೇಳಿದೆ.