ಬೆಳಗಾವಿ: ಮಾಜಿ ಸೈನಿಕರು ಸೇರಿ ಸಾವಿರಾರು ಜನರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿದ್ದ ಶಿವಾನಂದ ನೀಲಣ್ಣವರ್‌ಗೆ ಇ.ಡಿ ಶಾಕ್ ಕೊಟ್ಟಿದೆ. ನಿನ್ನೆ ಶಿವಾನಂದ ನೀಲಣ್ಣವರ್ (Shivanand Neelannavar) ಮೇಲೆ ಇಡಿ ದಾಳಿ ನಡೆದಿತ್ತು. ಸದ್ಯ ಎರಡನೇ ದಿನವೂ ಇಡಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಂ.ಹೆಚ್ ಟವರ್ ಮೇಲೆ ದಾಳಿ ನಡೆಸಲಾಗಿದ್ದು, ಸಿಆರ್‌ಪಿಎಫ್ ತುಕಡಿ ಭದ್ರತೆ ಜೊತೆಗೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶಿವಾನಂದ ನೀಲಣ್ಣವರ್ ಬಹುಕೋಟಿ ವಂಚನೆ ಕೇಸ್‌ಗೆ ಇಡಿ ಎಂಟ್ರಿ – ಮೂರು ಕಡೆ ದಾಳಿ
ಗೋವಾ, ಮಂಗಳೂರು ಮೂಲದ ಅಧಿಕಾರಿಗಳು ಇಡಿ ದಾಳಿಯಲ್ಲಿ ಭಾಗಿಯಾಗಿದ್ದು, ನಿನ್ನೆಯಿಂದ ದಾಖಲೆ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಇಡಿ, ಎಫ್ಐಆರ್ ದಾಖಲಾದ ಬಳಿಕ ನೀಲಣ್ಣವರ್ ಮನೆ ಮೇಲೆ ದಾಳಿ ಮಾಡಿದೆ.
ನಿನ್ನೆಯಿಂದಲೇ ನೀಲಣ್ಣವರ್‌ಗೆ ಇಡಿ ಅಧಿಕಾರಿಗಳಿಂದ ಡ್ರೀಲ್ ನಡೆಸಿದ್ದು, ದಾಖಲೆ ಪರಿಶೀಲನೆ ಜೊತೆಗೆ ಪ್ರತಿಯೊಂದರ ಕುರಿತು ಮಾಹಿತಿ ಪಡೆಯುತ್ತಿರುವ ಪಡೆಯುತ್ತಿದ್ದಾರೆ. ಅಧಿಕಾರಿಗಳು ನೀಲಣ್ಣವರ್ ಪತ್ನಿ ಹಾಗೂ ಸಹೋದರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸ್ನ್ಯಾಕ್ಸ್ ಪ್ಯಾಕೆಟ್‌ಗಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಮಾರಾಟ – ಆರೋಪಿ ಅರೆಸ್ಟ್



