ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚೆನ್ನಿ ಅವರ ಸಂಬಂಧಿಕರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಮರಳು ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೂಪಿಂದರ್ ಸಿಂಗ್ ಹನಿ ಚರಣ್ಜಿತ್ ಸಿಂಗ್ ಚೆನ್ನಿ ಸೋದರಳಿಯ ಆಗಿದ್ದಾರೆ. ಸದ್ಯ ಮೊಹಾಲಿ ಸೇರಿದಂತೆ ಪಂಜಾಬ್‍ನಲ್ಲಿ 10 ರಿಂದ 12 ಕಡೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಇನ್ನೇನೂ ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ನಡೆಸಿರುವ ಈ ದಾಳಿ ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಟೆಲಿಪ್ರೊಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
Advertisement
Advertisement
ಸೋಮವಾರವಷ್ಟೇ ಪಂಜಾಬ್ ವಿಧಾನ ಸಭಾ ಚುನಾವಣೆಯ ದಿನಾಂಕವನ್ನು ಮುಂದೂಡಲಾಯಿತು. ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ದಿನಾಂಕವನ್ನು 6 ದಿನ ಮುಂದಕ್ಕೆ ಹಾಕಿದೆ. ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಇದೀಗ ಈ ಚುನಾವಣೆಯನ್ನು ಆಯೋಗವು ಫೆ.20ಕ್ಕೆ ಮುಂದೂಡಿದೆ. ಹೀಗಾಗಿ ಫೆಬ್ರವರಿ 20 ರಂದು ಮೊದಲನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು: ಸಿ.ಟಿ ರವಿ