ನವದೆಹಲಿ: ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯ(ಇಡಿ) ಯೋಜನೆ ರೂಪಿಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.
ಇಡಿ ಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆ.20 ರಂದು ನಡೆಯಲಿರುವ ಪಂಜಾಬ್ ಚುನಾವಣೆಗೆ ಮುನ್ನ ಇಡಿ, ಸಂಪುಟ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮುಂದಿನ ದಿನಗಳಲ್ಲಿ ಬಂಧಿಸಬಹುದು ಎಂದು ನಮ್ಮ ಮೂಲಗಳು ತಿಳಿಸಿವೆ. ಈ ಹಿಂದೆಯೂ ಕೇಂದ್ರವು ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆಸಿತ್ತು. ಆದರೆ ಅವರಿಂದ ಏನೂ ಸಿಕ್ಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಮಲೈಕಾ ಖಡಕ್ ಉತ್ತರ
Advertisement
Advertisement
ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರು ಮತ್ತು ಕಾರ್ಯಕರ್ತರು ಈ ಸಂಸ್ಥೆಗಳಿಗೆ ಹೆದರುವುದಿಲ್ಲ. ಏಕೆಂದರೆ ನಾವು ಯಾವುದೇ ತಪ್ಪು ಮಾಡಿಲ್ಲ. ಮುಂಬರುವ ಕೆಲವೇ ದಿನಗಳಲ್ಲಿ ಪಂಜಾಬ್ ಚುನಾವಣೆಗೆ ಮುಂಚೆಯೇ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಹೊರಟಿದೆ. ಅವರನ್ನು ನಾವು ಸ್ವಾಗತಿಸುತ್ತೇವೆ ಎಂದರು.
Advertisement
Advertisement
ಬಿಜೆಪಿಯೂ ಸತ್ಯೇಂದ್ರ ಜೈನ್ ಅವರ ಮೇಲೆ ಮಾತ್ರವಲ್ಲ, ನನ್ನ ಮೇಲೆ, ಮನೀಶ್ ಸಿಸೋಡಿಯಾ, ಭಗವಂತ್ ಮಾನ್ ಅವರ ಮೇಲೆಯೂ ಇಡಿ ದಾಳಿ ಮಾಡಿಸಲಿ. ಅವರನ್ನು ನಾವು ನಗುನಗುತ್ತಾ ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಯಾವತಿ ಪ್ರಚಾರದಲ್ಲಿ ಸಕ್ರಿಯವಾಗಿಲ್ಲ ಯಾಕೆ – ಆಶ್ಚರ್ಯವಾಗ್ತಿದೆ ಎಂದ ಪ್ರಿಯಾಂಕಾ
ನಾವು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರಂತೆ ಇಡಿ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಅವರು ತಪ್ಪು ಮಾಡಿದ್ದರು. ಅದಕ್ಕೆ ಹತಾಶರಾಗಿದ್ದರು. ಆದರೆ ನಾವು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ಅದಕ್ಕೆ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಮ್ಮ ಡೆಪ್ಯೂಟಿ ಮನೀಶ್ ಸಿಸೋಡಿಯಾ, ಜೈನ್ ಅವರ ನಿವಾಸ ಮತ್ತು ಎಎಪಿಯ 21 ಶಾಸಕರನ್ನು ಬಂಧಿಸಲಾಗಿತ್ತು. ಆದರೆ ಅವರಿಗೆ ಏನೂ ಸಿಗಲಿಲ್ಲ ಎಂದು ನೇರವಾಗಿ ಹೇಳಿದರು.