ಮೈಸೂರು/ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯಗೆ (Siddaramaiah) ಮತ್ತೆ ಇಡಿ ಟೆನ್ಷನ್ ಶುರುವಾಗಿದೆ.
ಲೋಕಾಯುಕ್ತ ಬಿ-ರಿಪೋರ್ಟ್ (Lokayukta B Report) ಪ್ರಶ್ನಿಸಿ ಇಡಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿಂದು ನಡೆಯಿತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಏಪ್ರಿಲ್ 8ಕ್ಕೆ ಕಾಯ್ದಿರಿಸಿತು. ಇದನ್ನೂ ಓದಿ: ಗೃಹಪ್ರವೇಶ ಮುಗಿಸಿದ್ದ ಹೊಸ ಮನೆಗೆ ಕನ್ನ; ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಹೋಗಿದ್ದಾಗ ಮನೆಗಳವು
ಇಡಿ ಪರ ಹಿರಿಯ ವಕೀಲ ಮಧುಕರ್ ದೇಶಪಾಂಡೆ ವಾದ ಮಂಡನೆ ಮಾಡಿದರು. ಲೋಕಾಯುಕ್ತ ತನಿಖೆಯ ಬಗ್ಗೆ ಆಕ್ಷೇಪ ಎತ್ತಿ ವಾದ ಮಂಡಿಸಿದರು. ʻಬಿ ರಿಪೋರ್ಟ್ʼ ಚಾಲೆಂಜ್ ಮಾಡಲು ಇಡಿಗೆ ಅಧಿಕಾರ ಇದೆ ಎಂದು ಹೇಳಿದರು. ಇದನ್ನೂ ಓದಿ: ರೈಲ್ವೆಯಲ್ಲಿ 209 ಮೆಗಾವ್ಯಾಟ್ ಸೌರ ಸ್ಥಾವರ ಸ್ಥಾಪನೆ – ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೊಡುಗೆ
ಈ ವೇಳೆ ಜಡ್ಜ್ ಸಂತೋಷ್ ಗಜಾನನ ಭಟ್, ಕೋರ್ಟ್ ʻಬಿ ರಿಪೋರ್ಟ್ʼ ಒಪ್ಪಿಕೊಂಡರೆ ನಿಮ್ಮ ನಿಲುವೇನು? ಅಂತ ಪ್ರಶ್ನೆ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಇಡಿ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಹಂಚಿಕೊಂಡಿದೆ. ಲೋಕಾಯುಕ್ತ ಪೊಲೀಸರಿಗೆ ವಿವರ ಹಂಚಿಕೊಂಡರೂ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹೀಗಾಗಿ ಇಡಿ ಬಿ ರಿಪೋರ್ಟ್ ಪ್ರಶ್ನಿಸಿದೆ. ಒಂದು ವೇಳೆ ಕೋರ್ಟ್ ಬಿ ರಿಪೋರ್ಟ್ ಒಪ್ಪಿಕೊಂಡರೆ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ಬಿ ರಿಪೋರ್ಟ್ ಪ್ರಶ್ನಿಸಲು ಇಡಿಗೆ ಅಧಿಕಾರವಿದೆ ಎಂದು ವಾದಿಸಿದರು.
ಇದಕ್ಕೆ ನಿಮಗೆ ಅವಕಾಶ ಕೊಟ್ಟರೆ ದೂರುದಾರ ಸ್ಥಾನಮಾನ ಕೊಟ್ಟಂತೆ ಆಗುವುದಿಲ್ಲವೇ? ಅನುಸೂಚಿತ ಅಪರಾಧ ಇಲ್ಲದಿರುವಾಗ ಇಡಿಗೆ ಹೇಗೆ ಅಧಿಕಾರ ಬರಲಿದೆ..? ಎಂದು ವಿಜಯ್ ಮದನ್ ಲಾಲ್ ಕೇಸ್ ಉಲ್ಲೇಖಿಸಿ ಜಡ್ಜ್ ಇಡಿ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿತು. ಅಲ್ಲದೇ ಏಪ್ರಿಲ್ 8ಕ್ಕೆ ಲೋಕಾಯುಕ್ತ ಎಸ್‌ಪಿಪಿಗೂ ವಾದ ಮಂಡನೆ ಅವಕಾಶ ಕಲ್ಪಿಸಲು ಕೋರ್ಟ್ ನಿರ್ಧರಿಸಿತು. ಇದನ್ನೂ ಓದಿ: ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ – ಯತ್ನಾಳ್ ಶಪಥ