LatestMain PostNational

ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಪ್ರಕರಣ – ಸೆ.27ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ. ಪ್ರಕರಣ ಮೂವರು ಆರೋಪಿಗಳು ಜಾರ್ಜ್‍ಶೀಟ್ ಜೊತೆಗೆ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಯಿತು.

ಇಂದು ವಿಚಾರಣೆ ವೇಳೆ ಪ್ರಕರಣ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಶರ್ಮಾ, ರಾಜೇಂದ್ರ. ಎನ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಗೋಡಾನ್‍ನಿಂದ ಬರೋಬ್ಬರಿ 17 ಲಕ್ಷ ಮೌಲ್ಯದ ಚಾಕ್ಲೇಟ್ ಬಾರ್‌ಗಳನ್ನು ಕದ್ದ ಖದೀಮರು!

ಇದಕ್ಕೆ ಒಪ್ಪಿದ ಇಡಿ ಪರ ವಕೀಲರು, ತರ್ಜುಮೆ ಮಾಡಿ ದಾಖಲೆಗಳನ್ನು ನೀಡಲು ನಾಲ್ಕೈದು ವಾರಗಳ ಸಮಯಬೇಕು ಎಂದು ಕೋರ್ಟ್‍ಗೆ ಹೇಳಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ

ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಈಗಾಗಲೇ ಜಾಮೀನು ಸಿಕ್ಕಿದೆ. ಅದಾಗ್ಯೂ ನ್ಯಾಯಾಲಯಕ್ಕೆ ಗೌರವ ಕೊಟ್ಟು ಕೋರ್ಟ್‍ಗೆ ಹಾಜರಾಗಿದ್ದೆ. ಇತರೆ ಆರೋಪಿಗಳು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಕೊಟ್ಟ ಬಳಿಕ ಮುಂದೆ ನೋಡಿಕೊಂಡು ಮಾತನಾಡುತ್ತೇನೆ ಎಂದರು.

Live Tv

Leave a Reply

Your email address will not be published.

Back to top button