CrimeLatestMain PostNational

ಗೋಡಾನ್‍ನಿಂದ ಬರೋಬ್ಬರಿ 17 ಲಕ್ಷ ಮೌಲ್ಯದ ಚಾಕ್ಲೇಟ್ ಬಾರ್‌ಗಳನ್ನು ಕದ್ದ ಖದೀಮರು!

- ಸಿಸಿಟಿವಿ ವೀಡಿಯೋ ರೆಕಾರ್ಡರನ್ನೂ ಕದ್ದು ಎಸ್ಕೇಪ್

ಲಕ್ನೋ: ಪ್ರಸಿದ್ಧ ಬ್ರಾಂಡ್‍ನ ಸುಮಾರು 17 ಲಕ್ಷ ಮೌಲ್ಯದ ಚಾಕ್ಲೆಟ್ ಬಾರ್‍ಗಳನ್ನು ಖದೀಮರು ರಾತ್ರೋರಾತ್ರಿ ಗೋಡಾನ್‍ನಿಂದ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಲಕ್ನೋದ ಚಿನ್ ಹಾಟ್ ಪ್ರದೇಶದಲ್ಲಿ ನಡೆದಿದೆ. ಈ ಚಾಕ್ಲೆಟ್ ಗೋಡಾನ್ ಬಹುರಾಷ್ಟ್ರೀಯ ಚಾಕ್ಲೇಟ್ ವಿತರಕರಾಗಿರುವ ಉದ್ಯಮಿ ರಾಜೇಂದ್ರ ಸಿಂಗ್ ಸಿಧು ಅವರಿಗೆ ಸೇರಿದ್ದಾಗಿದೆ.

ಕಳ್ಳರು ಸುಮಾರು 150 ಕಾರ್ಟನ್‍ (ಬಾಕ್ಸ್) ಚಾಕ್ಲೇಟ್ ಬಾರ್ ಗಳ ಜೊತೆಗೆ ಕೆಲವು ಬಿಸ್ಕೆಟ್ ಬಾಕ್ಸ್ ಗಳನ್ನು ಕೂಡ ಕದ್ದಿದ್ದಾರೆ. ಈ ಸಂಬಂಧ ಸಿಧು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅದರಲ್ಲಿ ತಾನು ಇತ್ತೀಚೆಗೆ ಚಿನ್‍ಹಟ್‍ನಲ್ಲಿರುವ ತಮ್ಮ ಹಳೆಯ ಮನೆಯಿಂದ ಗೋಮತಿ ನಗರದ ವಿಭೂತಿ ಖಂಡ್‍ನಲ್ಲಿರುವ ಅಪಾರ್ಟ್‍ಮೆಂಟ್‍ಗೆ ಸ್ಥಳಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.

ತನ್ನ ಹಳೆಯ ಮನೆಯನ್ನು ಚಾಕ್ಲೇಟ್ ವಿರತಣೆಯ ಗೋಡಾನ್ ಆಗಿ ಪರಿವರ್ತನೆ ಮಾಡಿದ್ದೇನೆ. ಮಂಗಳವಾರ ಸ್ಥಳೀಯರು ಕರೆ ಮಾಡಿ, ಗೋಡಾನ್ ಬಾಗಿಲು ಒಡೆದು ಯಾರೋ ಒಳಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆ ಕೂಡಲೇ ನಾನು ಸ್ಥಳಕ್ಕೆ ತೆರಳಿದೆ. ಈ ವೇಳೆ ಇಡೀ ಗೋಡಾನ್ ಖಾಲಿಯಾಗಿರುವುದನ್ನು ನೋಡಿ ದಂಗಾದೆ. ಇನ್ನೊಂದು ವಿಚಾರ ಅಂದ್ರೆ ಕಳ್ಳರು ಬರೀ ಚಾಕ್ಲೇಟ್ ಮಾತ್ರವಲ್ಲದೆ ಸಿಸಿಟಿವಿ ವೀಡಿಯೋ ರೆಕಾರ್ಡರ್ ಕೂಡ ಹೊತ್ತೊಯ್ದಿದ್ದಾರೆ ಎಂದು ಸಿಧು ಪೊಲೀಸರ ಬಳಿ ಹೇಳಿದ್ದಾರೆ.

POLICE JEEP

ಈ ಸಂಬಂಧ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ರಾತ್ರಿ ಒಂದು ಟ್ರಕ್ ಬಂದಿತ್ತು. ಆದರೆ ನಾವು ಸ್ಟಾಕ್ ತೆಗೆದುಕೊಂಡು ಹೋಗಲು ಟ್ರಕ್ ಬಂದಿದೆ ಅಂತ ಅಂದುಕೊಂಡಿದ್ದೆವು. ಆದರೆ ಕಳ್ಳರೇ ಟ್ರಕ್ ತಂದು ಸ್ಟಾಕ್ ಕದ್ದಿರುವುದಾಗಿ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಕಳ್ಖರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಧುಗೆ ಭರವಸೆ ನೀಡಿದ್ದಾರೆ.

Live Tv

Leave a Reply

Your email address will not be published.

Back to top button