ಪಾಟ್ನಾ: ರಾಷ್ಟ್ರೀಯ ಜನತಾ ದಳ (RJD) ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಅವರ ಕುಟುಂಬದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿದೆ.
ED has provisionally attached 6 immovable assets located at New Delhi, Ghaziabad and Patna having book value of Rs. 6.02 Crore belonging to Smt. Rabri Devi, Smt. Misha Bharti (daughter of Lalu Yadav), Vineet Yadav (husband of Smt Hema Yadav D/o Lalu Yadav),
— ED (@dir_ed) July 31, 2023
Advertisement
ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ವಸತಿ ಗೃಹ ಸೇರಿದಂತೆ ಯಾದವ್ ಕುಟುಂಬದ ದೆಹಲಿ ಮತ್ತು ಪಾಟ್ನಾದ ಒಟ್ಟು 6 ಕೊಟಿ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಯುಪಿಎ-1 ಸರ್ಕಾರದಲ್ಲಿ ಲಾಲು ಪ್ರಸಾದ್ ರೈಲ್ವೇ ಸಚಿವರಾಗಿದ್ದಾಗ ನಡೆದ ಉದ್ಯೋಗ ಹಗರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಗ್ಗೆ ದೆಹಲಿಯಲ್ಲಿ ಸಭೆ: ಡಿ.ಕೆ ಶಿವಕುಮಾರ್
Advertisement
Shiv Kumar Yadav (father-in-law of Smt. Hema Yadav), M/s A B Exports Pvt Ltd and M/s A K Infosystem Pvt Ltd., both companies owned & controlled by family members of Lalu Prasad Yadav under the provisions of PMLA, 2002 in the Railway job for land scam.
— ED (@dir_ed) July 31, 2023
Advertisement
ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಪುತ್ರಿಯರಾದ ಮಿಸಾ ಭಾರತಿ (ರಾಜ್ಯಸಭೆಯಲ್ಲಿ ಆರ್‍ಜೆಡಿ ಸಂಸದ), ಚಂದಾ ಯಾದವ್ ಮತ್ತು ರಾಗಿಣಿ ಯಾದವ್ ಅವರ ಹೇಳಿಕೆಗಳನ್ನು ಇಡಿ ದಾಖಲಿಸಿದೆ ಎಂದು ಸಂಸ್ಥೆ ವರದಿ ಹೇಳಿದೆ.
Advertisement
ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ. ಆ ನಂತರ ನರೇಂದ್ರ ಮೋದಿ ವಿದೇಶದಲ್ಲಿ ನೆಲೆಸುತ್ತಾರೆ ಎಂದು ವ್ಯಂಗ್ಯವಾಡಿದ್ದರು.
Web Stories